ಬೆಳಗಾವಿ : ಕಾನೂನು ಪಾಲಿಸಬೇಕಾದ ವಕೀಲರೇ ಸೂಪಾರಿ ಕೊಟ್ಟು ವಕೀಲನ ಕೊಲೆ ಬೆಚ್ಚಿಬೀಳಿಸುವಂತಿದೆ ಬೆಳಗಾವಿಯ ನ್ಯಾಯವಾದಿಯ ಮರ್ಡರ್ ಮಿಸ್ಟರಿ. ನ್ಯಾಯವಾದಿ ಅಪಹರಿಸಿ ಕೊಲೆ ಮಾಡಿದ್ದ ದುಷ್ಕರ್ಮಿಗಳು ರಾಯಭಾಗದಲ್ಲಿ ಅಪಹರಣ, ಉತ್ತರ ಕನ್ನಡದ ರಾಮನಗರದಲ್ಲಿ aನ್ಯಾಯವಾದಿಯ ಕೊಲೆ.
ರಾಮನಗರ ಅರಣ್ಯ ಪ್ರದೇಶದಲ್ಲಿ ಬರ್ಬರ ಹತ್ಯೆಗೈದು ಮೃತದೇಹ ಸುಟ್ಟಿದ್ದ ಆರೋಪಿಗಳು ನ್ಯಾಯವಾದಿ ಕೊಲೆಗೆ 14 ಲಕ್ಷ ಸೂಪಾರಿ ನೀಡಿದ್ದ ನಾಲ್ವರು ವಕೀಲರು. ವಕೀಲನ ಕಗ್ಗೊಲೆಗೆ ಕಾರಣವಾಯಿತು ಕೋಟ್ಯಂತರ ಬೆಲೆಬಾಳುವ 1.4 ಎಕರೆ ಜಮೀನು. ರಾಯಭಾಗ ಪಟ್ಟಣದಲ್ಲಿ ಸಂತೋಷ ಪಾಟೀಲ ಅಪಹರಿಸಿ ಕೊಲೆ ಮಾಡಿದ ಆರೋಪಿಗಳು.
ರಾಯಭಾಗ ಪಟ್ಟಣದ ನ್ಯಾಯವಾದಿ ಶಿವಾನಂದ ಪಾಟೀಲ ಸೇರಿ ನಾಲ್ವರಿಂದ ಕೃತ್ಯ.ವಕೀಲ ಸಂತೋಷ ಮರ್ಡರ್ ಪ್ರಕರಣ ಪತ್ತೆ ಆಗಿದ್ದೇ ರಣರೋಚಕ. ಬೇರೆ ಪ್ರಕರಣದ ಆರೋಪಿ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದ ರಾಯಭಾಗ ಪೊಲೀಸರು.
ಪ್ರಕರಣ ಸಂಬಂಧ ವಕೀಲರಾದ ಶಿವನಗೌಡ ಪಾಟೀಲ, ಭರತ್ ಕೋಳಿ, ಕಿರಣ್ ಕೆಂಪವಾಡೆ ಮಹಾವೀರ ಹಂಜೆ. ಸುರೇಶ ನಂದಿ, ಉದಯ ಮುಶೆನ್ನವರ, ಸಂಜಯ್ ಹಳಬಣ್ಣವರ, ರಾಮು ದಂಡಾಪುರ ಬಂಧಿತರು. ತಲೆಮರೆಸಿಕೊಂಡಿರುವ ಮಂಜುನಾಥ ತಳವಾರ, ನಾಗರಾಜಗೆ ಶೋದಕಾರ್ಯ
ವರದಿ ದಯಾನಂದ. ಎಂ.

