ಮಡಿಕೇರಿ: ಪಕ್ಕದ ಮನೆಯಲ್ಲಿ ಯಾರು ಇಲ್ಲದ ಸಂದರ್ಭವನ್ನು ಸಾಧಿಸಿ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಿಸಿಯಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಅಯ್ಯಂಗರಿ ಗ್ರಾಮದ ಮಿದ್‌ಲಾಜ್(22) ಹಾಗೂ ಫಾತೀಮಾ(26) ಬಂಧಿತ ಆರೋಪಿಗಳು. ಅಯ್ಯಂಗರಿ ಗ್ರಾಮದ ನಿವಾಸಿ ಕೆ.ಹೆಚ್. ಜಲೀನಾ ಎಂಬವರು ಏ.12 ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ತೆರಳಿ ಮರುದಿನ ಸಂಜೆ ಅಗಮಿಸಿದ ಸಂದರ್ಭ ಮನೆಯ ಹಿಂಬಾಗಿಲಿನ ಬಾಗಿಲು ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ ಅಂದಾಜು 232 ಗ್ರಾಂ ಚಿನ್ನಭಾರಣ ಕಳ್ಳತನವಾಗಿಉವುದು ತಿಳಿದು ಬಂದಿತ್ತು. ಇದನ್ನೂ ಓದಿ: ಅಕ್ರಮ ಮದ್ಯ ಶಂಕೆ ಮೇಲೆ ದಾಳಿ- ದಾಳಿಯಲ್ಲಿ 18 ಕೋಟಿ ಪತ್ತೆ
ಈ ಸಂಬಂಧ ಭಾಗಮಂಡಲ ಠಾಣೆಯಲ್ಲಿ ಜಲೀನಾ ಅವರು ಪ್ರಕರಣ ದಾಖಲಿಸಿದ್ದರು. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಸಾಕ್ಷಾö್ಯಧಾರ ಕಲೆಹಾಕಿ ಆರೋಪಿಗಳ ಪತೆಗೆ ಬಲೆ ಬೀಸಿದ್ದರು. ಇದನ್ನೂ ಓದಿ: ಧನೂಷ್-ಐಶ್ವರ್ಯ ರಜನಿಕಾಂತ್ ಡಿವೋರ್ಸ್‌ಗೆ ಕೋರ್ಟ್ ನೋಟಿಸ್

ಕಳ್ಳತನ ನಡೆದ ಜಲೀನಾ ಅವರ ಮನೆಯ ಪಕ್ಕದಲ್ಲಿಯೇ ನೆಲೆಸಿದ್ದ ಫಾತೀಮಾಗೆ ಮನೆಯಲ್ಲಿ ಯಾರೂ ಇಲ್ಲದಿರುವುದು ಗೊತ್ತಾಗಿ ಅನತಿ ದೂರದಲ್ಲಿ ವಾಸವಿದ್ದ ಸ್ನೇಹಿತ ಮಿದ್‌ಲಾಜ್‌ನ ಸಹಾಯ ಪಡೆದು ಈ ಕೃತ್ಯವೆಸಗಿದ್ದಾಳೆ. ಇದನ್ನೂ ಓದಿ: ರಾಮಮಂದಿರದಲ್ಲಿ ಬಾಲರಾಮನ ಹಣೆಯ ಸ್ಪರ್ಶಿಸಿದ ಸೂರ್ಯರಶ್ಮಿ
.

