ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರ ಕಾಲ್ ಶೀಟ್‌ಗಾಗಿ ನಿರ್ದೇಶಕರು, ನಿರ್ಮಾಪಕರು ಕಾದು ಕುಳಿತ್ತಿದ್ದಾರೆ. ಇದೇ ವೇಳೆ ಸ್ನೇಹಿತ ಆನಂದ್ ದೇವರಕೊಂಡ (Anand Devarakonda) ನಟಿಸಿರುವ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ. ಈ ಸಮಾರಂಭದಲ್ಲಿ ವಿಜಯ್ ದೇವರಕೊಂಡ ಹೆಸರು ಕೇಳ್ತಿದ್ದಂತೆ ರಶ್ಮಿಕಾ ನಾಚಿ ನೀರಾಗಿದ್ದಾರೆ. ನಂತರ ಬೇಬಿ ಚಿತ್ರದ ನಿರ್ದೇಶಕ ಜೊತೆ ಕೆಲಸ ಮಾಡುವ ಆಸಕ್ತಿಯಿದೆ ಎಂದು ಹೇಳಿದ್ದಾರೆ.
’ಬೇಬಿ’ ಸಿನಿಮಾದ ಸಕ್ಸಸ್ ನಂತರ ಆನಂದ್ ದೇವರಕೊಂಡ (Anand Devarakonda) ಹೊಸ ಚಿತ್ರ ‘ಗಂ ಗಂ ಗಣೇಶ’ ಪ್ರಿ ರಿಲೀಸ್ ಕಾರ್ಯಕ್ರಮ ಸೋಮವಾರ (ಮೇ 27) ರಾತ್ರಿ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಇದನ್ನೂ ಓದಿ: ‘ಕರಾವಳಿ’ಗೆ ಖಡಕ್ ವಿಲನ್ ಎಂಟ್ರಿ!

ಈ ಸಂದರ್ಭದಲ್ಲಿ ರಶ್ಮಿಕಾ ಅವರನ್ನ ಕೆಲವು ಪ್ರಶ್ನೆಗಳು ಕೇಳಿದರು. ನಿಮ್ಮ ಫೇವರಿಟ್ ನಟ ಯಾರು? ಎಂದು ಕೇಳಿದಾಗ ಉತ್ತರಿಸಲು ಹಿಂದು ಮುಂದು ನೋಡುತ್ತಿದ್ದರು. ಆಗ ಅಭಿಮಾನಿಗಳು ‘ರೌಡಿ’ ಎಂದು ವಿಜಯ್ ದೇರವಕೊಂಡ (Vijay Devarakonda) ಹೆಸರು ಕೂಗಲು ಆರಂಭಿಸಿದರು.

ಅಭಿಮಾನಿಗಳು ರೌಡಿ ಎಂದು ಹೇಳಲು ಶುರು ಮಾಡಿದ್ದ ತಕ್ಷಣ ರಶ್ಮಿಕಾ ನಾಚಿ ನೀರಾಗಿ ಮಾತನಾಡಿ, ನೀನು ನನ್ನ ಫ್ಯಾಮಿಲಿ ಕಣೋ ಆನಂದ್ ಯಾಕೋ ಹೀಗೆ ತಗ್ಲಾಕ್ತೀಯಾ? ಬಿಡಪ್ಪಾ ಎಂದು ನಗುತ್ತಲೇ ನಟಿ ಉತ್ತರಿಸಿದ್ದಾರೆ. ನಂತರ ನನ್ನ ಫೇವರಿಟ್ ಹೀರೋ ರೌಡಿನೇ ಎಂದಿದ್ದಾರೆ. ಚಿಕ್ಕ ರೌಡಿ ಎಂದು ಆನಂದ್ ದೇವರಕೊಂಡ ಪರ ವಹಿಸಿ ನಟಿ ಮಾತನಾಡಿದ್ದಾರೆ. ಸದ್ಯ ರಶ್ಮಿಕಾ ಹಾಗೂ ಆನಂದ್ ದೇವರಕೊಂಡ ಕ್ಯೂಟ್ ಸಂಭಾಷಣೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಮೂಲಕ ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ನಟಿ ಸುಳಿವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಹೇಳುವ ಮೂಲಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಸಿಹಿಸುದ್ದಿ ಕೊಡ್ತಾರಾ ಎಂದು ಕಾದುನೋಡಬೇಕಿದೆ. ಸದ್ಯ ಸಿಖಂದರ್, ಅನಿಮಲ್ ಪಾರ್ಕ್, ಪುಷ್ಪ 2, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿದ್ದು, ಬಹುಬಷಾ ನಟಿ ಎನ್ನಿಸಿಕೊಂಡಿದ್ದಾರೆ.