ಬೆಂಗಳೂರು: ಬಾಡಿಗೆ ಮನೆ (Home) ನೋಡಲು ಹೋಗಿದ್ದ ವಿದ್ಯಾಥಿಗಳನ್ನು (Students) ಕೂಡಿ ಹಾಕಿ ಹಲ್ಲೆ ಮಾಡಿರುವ ಘಟನೆ ಯಲಹಂಕ (yelhanka) ನ್ಯೂ ಟೌನ್ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದಿದೆ.
ಕೃಷ್ಣ ಬಾಜಪೇಯಿ ಮತ್ತು ಯುವರಾಜ್ ಹಲ್ಲೆಗೂಳಗಾದ ವಿದ್ಯಾಥಿಗಳು. ಇಬ್ಬರು ರಾಜಾನುಕುಂಟೆಯ ಖಾಸಗಿ ಕಾಲೆಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಬಾಡಿಗೆ ಮನೆ ನೋಡಲು ಹೋಗಿದ್ದರು. ಇದನ್ನೂ ಓದಿ: ಗಂಗಾವತಿಯಲ್ಲಿ ಜೈ ಶ್ರೀರಾಮ್ ಘೋಷಣೇ ಕೂಗಿದ ವ್ಯಕ್ತಿ ಮೆಲೆ ಹಲ್ಲೆ
ಗುಂಪೊಂದು ಇಬ್ಬರನ್ನೂ ಅಪಹರಿಸಿ ಒಂದು ಕೋಣೆಯಲ್ಲಿ ಕೂಡಿ ಹಾಕಿ ಇಬ್ಬರ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿಸ ಸಿಗರೇಟ್‌ನಿಂದ ಸುಟ್ಟಿದ್ದಾರೆ. ಮತ್ತೊಂದು ವಿದ್ಯಾರ್ಥಿಗಳ ಗುಂಪು ಕೃಷ್ಣರ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿದೆ. ಅಲ್ಲದೆ 50 ಸಾವಿರಕ್ಕೂ ಹೆಚ್ಚು ಹಣ ವರ್ಗಾವಣೆ ಮಾಡಿಸಿಕೊಂಡಿದೆ. ಇದನ್ನೂ ಓದಿ: ಹರ್ಷಿಕಾ-ಭುವನ್ ಹಲ್ಲೆ ಪ್ರಕರಣ – ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭೇಟಿ ನೀಡಿದ ದಂಪತಿ