ಬೆಂಗಳೂರು: ಸೋಮವಾರವಷ್ಟೇ ಕನ್ನಡಿರ ಉದ್ಯೋಗ ಅವಕಾಶಗಳಿಗಾಗಿ ಕರವೇ ಧ್ವನಿ ಎತಿತ್ತು. ಆದರೆ ಇದೀಗ ರೈಲ್ವೆ(Railway) ಹುದ್ದೆ ಪರೀಕ್ಷೆಗಳನ್ನ ಕನ್ನಡ (Kannada) ಭಾಷೆಯಲ್ಲಿ ಬರೆಯುವ ಅವಕಾಶ ಇಲ್ಲ.
ನಮ್ಮ ನೆಲದಲ್ಲಿ ಉದ್ಯೋಗಕ್ಕೆ ಒಂದೆಡೆ ಕನ್ನಡ ಪರ ಸಂಘಟನೆಗಳ ಹೋರಾಟ ನಡೆಯುತ್ತಿದ್ದಾರೆ, ಇನ್ನೊಂದೆಡೆ ರಾಜ್ಯದ ರೈಲ್ವೆಯಲ್ಲಿ ಮೇಲ್ಮಟ್ಟದ ಹುದ್ದೆಗಳು ಕನ್ನಡಿಗರಿಂದ ದೂರ ದೂರ ದೂರ ಹೋಗುತ್ತಿವೆ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್
ಕೇಂದ್ರ ಸರ್ಕಾರದ ರೈಲ್ವೆ ಪರೀಕ್ಷೆಗಳಲ್ಲಿ ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆಗೆ ಒತ್ತು ಕೊಡುತ್ತಿಲ್ಲ. ಈ ಪರೀಕ್ಷೆಗಳನ್ನು ಬರೆಯಲು ಕೇವಲ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಬರೆಯಲು ಅವಕಾಶವಿದೆ. ಯಾರೇ ಆದರೂ ಈ ಎರಡು ಭಾಷೆಯನ್ನ ಆಯ್ಕೆಮಾಡಿಕೊಳ್ಳಲು ಸಾಧ್ಯ.

ಕಳೆದ ವರ್ಷ ಕೂಡ ಮೈಸೂರು ವಿಭಾಗದಲ್ಲಿ 167 ಸಹಾಯಕ ಲೋಕೋಪೈಲಟ್ ಹುದ್ದೆಗಳಿಗಾಗಿ ಸೀಮಿತ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ಇದು ಕನ್ನಡಿಗ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗುತ್ತಿದೆ.ಇದನ್ನೂ ಓದಿ: ಇಂದು ಲೋಕಸಭೆಯಲ್ಲಿ ಮಾತನಾಡಲಿರುವ ಪ್ರಧಾನಿ ಮೋದಿ

