ನವದೆಹಲಿ: ದೆಹಲಿಯಿಂದ ಮುಂಬೈಗೆ ಹೊರಟಿದ್ದ ಆಕಾಶ ವಿಮಾನ(Akash Airlines)ಕ್ಕೆ ಬಾಂಬ್ ಬೆದರಿಕೆ(Bomb Threat) ಬಂದ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ (Ahmedabad) ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.
ಇತ್ತಿಚಿನ ದಿನಗಳಲ್ಲಿ ಹುಸಿ ಬಾಂಬ್ ಬೆದರಿಕೆಗಳು ಹೆಚ್ಚಾಗಿದ್ದು, ಒಂದು ದಿನದ ಹಿಂದೆ ಪ್ಯಾರಿಸ್‌ನಿಂದ 306 ಜನರನ್ನು ಹೊತ್ತು ಮುಂಬೈಗೆ ಹೊರಟಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಬಳಿಕ ಮುಂಬೈಗೆ ಆಗಮಿಸುವ ಮೊದಲು ನಗರದ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಇದೀಗ ಮತ್ತೊಂದು ಬಾಂಬ್ ಬೆದರಿಕೆ ಬಂದಿದೆ. ಇದನ್ನೂ ಓದಿ: ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ಡ್ರಗ್ಸ್ ಸಪ್ಲೈ ಮಾಡಿದ ಡಿಜೆ ಹಳ್ಳಿ ಪೆಡ್ಲರ್ ಅರೆಸ್ಟ್
ಆಕಾಶ ವಿಮಾನ ದೆಹಲಿಯಿಂದ ಮುಂಬೈಗೆ ಹೊರಟಿತ್ತು. ಈ ವಿಮಾನದಲ್ಲಿ ಒಟ್ಟು 186 ಪ್ರಯಾಣಿಕರಿದ್ದರು. ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಭದ್ರತಾ ಕಾರಣಗಳಿಂದ ಅಹಮದಾಬಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.ಇದನ್ನೂ ಓದಿ: ಮಗಳ ಪ್ರೇಮ ವಿವಾಹಕ್ಕೆ ಮನನೊಂದು ತಾಯಿ ನೇಣಿಗೆ ಶರಣು

