ಜಾರ್ಖಂಡ್: ಜಾರ್ಖಂಡ್ ನ ಗುಮ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಯೊಂದಿಗಿನ ಗುಂಡಿನ ಚಕಮಕಿಯಲ್ಲಿ ನಿಷೇಧಿತ ಮಾವೋವಾದಿ (Maoists) ಮೂವರು ಸದಸ್ಯರು ಹತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾರ್ಖಂಡ್ ನ ಗುಮ್ಲಾ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ನಡೆದ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಿಷೇಧಿತ ಮಾವೋವಾದಿ ಗುಂಪಿನ ಮೂವರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಗುಂಡಿನ ದಾಳಿಯು ಜಾರ್ಖಂಡ್ ಜಾಗ್ವಾರ್ ಹಾಗೂ ಗುಮ್ಲಾ ಪೊಲೀಸರನ್ನು ಒಳಗೊಂಡಿರುವ ಭದ್ರತಾ ಪಡೆಗಳು ಇಲ್ಲಿನ ಜನಮುಕ್ತಿ ಪರಿಷತ್ ನ ಮಾವೋವಾದಿ ಗುಂಪಿನ ಸದಸ್ಯರ ನಡುವಿನ ಗುಂಡಿನ ಚಕಮಕಿ ಬೆಳಗ್ಗೆ ಎಂಟು ಗಂಟೆಗೆ ವಿಷ್ಣುಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆಯಿತು. ಈ ದಾಳಿಯಲ್ಲಿ ಮೂವರು ಜೆಜೆಎಂಪಿ ಮಾವೋವಾದಿಗಳು ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿದ್ದ ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವಕ್ತಾರ ಮೈಕಲ್ ರಾಜ್ ಎಸ್ ಮಾಹಿತಿ ತಿಳಿಸಿದ್ದಾರೆ. ಈ ಬಗ್ಗೆ ಶೋಧ ಕಾರ್ಯಾಚರಣೆ ಇನ್ನೂ ಕೂಡ ಮುಂದುವರೆಯುತ್ತಿದೆ ಎನ್ನಲಾಗಿದೆ. ಕಳೆದ ವಾರ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 10 ಲಕ್ಷ ರೂ. ರಿವಾರ್ಡ್ ಘೋಷಿಸಲಾಗಿದ್ದ ಮಾವೋವಾದಿಯೊಬ್ಬರು ಸಾವಿಗೀಡಾಗಿದ್ದರು.

