ಬೆಳಗಾವಿಯ ರವಿವಾರ ಪೇಟೆ ಈರುಳ್ಳಿ ಮಾರುಕಟ್ಟೆ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಮೂರು ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಸ್ಟೇಷನರಿ ಅಂಗಡಿ, ಪ್ಲಾಸ್ಟಿಕ್ ಬುಟ್ಟಿ ಸೇರಿ ಸಾಮಾಗ್ರಿಗಳ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಎರಡು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಕಂಟ್ರೋಲ್ ಗೆ ಬಾರದ ಬೆಂಕಿ ಇನ್ನೂ ಕೆಲ ಅಂಗಡಿಗಳಿಗೆ ಬೆಂಕಿ ಹೊತ್ತುವ ಭೀತಿ ಎದುರಾದಾಗ ಪಕ್ಕದಲ್ಲಿ ಪೇಂಟಿಂಗ್ ಅಂಗಡಿ ಮತ್ತು ಪಟಾಕಿ ಅಂಗಡಿಗಳು ಇರುವ ಕಾರಣಕ್ಕೆ ಮತ್ತಷ್ಟು ಆತಂಕ ಪಡುವ ವಾತಾವರಣ ನಿರ್ಮಾಣವಾಗಿತ್ತು…
ವರದಿ. ದಯಾನಂದ. ಎಂ.

