ಬೆಳಗಾವಿ : ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ 17 ವರ್ಷದ ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್ ನಡೆಸಲಾಗಿದೆ. ಈ ಸಾಮೂಹಿಕ ಅತ್ಯಾಚಾರ ಕೇಸ್ ಬೆಳಗಾವಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಭಿಷೇಕ ದೇವನೂರು, ಆದಿಲ್ ಶಾ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಇನ್ಸ್‌ಟಾಗ್ರಾಮ್‌ನಲ್ಲಿ ಆರೋಪಿ ಅಭಿಷೇಕ್, ಯುವತಿ ಪರಿಚಯ ಮಾಡಿಕೊಂಡಿದ್ದ. ಬಳಿಕ ಅಥಣಿ ತಾಲೂಕಿನ ಕೊಕಟನೂರು ಜಾತ್ರೆಗೆ ಆಗಮಿಸಿದ್ದಾಗ ಭೇಟಿಯಾಗಿ ಪರಿಚಯ ಮಾಡಿಕೊಂಡಿದ್ದಾರೆ.ಜನವರಿ 3ರಂದು ಯುವತಿಯನ್ನ ಪುಸಲಾಯಿಸಿ ಅಭಿಷೇಕ್ ಕರೆದುಕೊಂಡು ಹೋಗಿದ್ದ. ಸವದತ್ತಿಯ ರೇಣುಕಾದೇವಿಗೆ ಹೋಗಿ ಬರೋಣ ಎಂದು ಯುವತಿಗೆ ತಿಳಿಸಿದ್ದ. ತನ್ನ ಸ್ನೇಹಿತೆ ಜೊತೆ ಅಭಿಷೇಕ ಜೊತೆ ಯುವತಿ ತೆರಳಿದ್ದಳು.
ಅಭಿಷೇಕ್ ಸಹ ತನ್ನ ಜೊತೆ ಆದಿಲ್ ಶಾ, ಕೌತುಕ್ ಬಾಬುಸಾಬ್ ಬಡಿಗೇರ್‌ನನ್ನು ಕರೆದುಕೊಂಡು ಬಂದಿದ್ದ. ಎರ್ಟಿಗಾ ಕಾರಿನಲ್ಲಿ ಇಬ್ಬರು ಅಪ್ರಾಪ್ತೆಯರನ್ನು ಮೂವರು ಆರೋಪಿಗಳು ಕರೆದುಕೊಂಡು ಹೋಗಿದ್ದರು. ಸವಸುದ್ದಿ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು ಓರ್ವಳ ಮೇಲೆ ಇಬ್ಬರಿಂದ ಅತ್ಯಾಚಾರ ಎಸಗಲಾಗಿದೆ. ಇದೇ ವೇಳೆ ಮತ್ತೋರ್ವ ಯುವತಿ ಮೇಲೆ ಕಾರಿನಲ್ಲೇ ಚಾಲಕ ಕೌತುಬ್‌ನಿಂದ ಅತ್ಯಾಚಾರವಾಗಿದೆ. ಗ್ಯಾಂಗ್ ರೇಪ್ ಹಾಗೂ ಅತ್ಯಾಚಾರ ಮಾಡಿ ಅದರ ವಿಡಿಯೋವನ್ನೂ ಕೂಡ ಮಾಡಿಕೊಂಡಿದ್ದರು.
ವಿಡಿಯೋ ಇಟ್ಟುಕೊಂಡು ಮತ್ತೆ ನೊಂದ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಮುಂದಿನ ವಾರ ನಮ್ಮ ಜೊತೆಗೆ ಗೋವಾಗೆ ಬರದಿದ್ದರೆ ವಿಡಿಯೋ ವೈರಲ್ ಮಾಡುವ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಈ ವಿಷಯ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಲಾಗಿದೆ.
ಜ.13ರಂದು ಹಾರೂಗೇರಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖು ಮಾಡಲಾಗಿದೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ಸ್‌ಟಾಗ್ರಾಮ್ ಬಳಸುವಾಗ ಎಚ್ಚರ :
ಇನ್ಸ್‌ಟಾಗ್ರಾಮ್ ಬಳಸುವಾಗ ಸಾಧ್ಯವಾದಷ್ಟು ಎಚ್ಚರಿಕೆ ಇರುವಂತೆ ಯುವತಿಯರಿಗೆ ಹೇಳಲಾಗುತ್ತದೆ. ಹಾಗಿದ್ದರೂ, ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗುವ ಯುವಕರ ಮೆಸೇಜ್‌ಗೆ ರಿಪ್ಲೈ ಮಾಡುವುದು ಮಾತ್ರವಲ್ಲ ಅವರೊಂದಿಗೆ ಪ್ರೀತಿಗೆ ಬಿದ್ದರೆ ಏನಾಗುತ್ತದೆ ಅನ್ನೋದಕ್ಕೆ ಈ ಘಟನೆ ಉದಾಹರಣೆಯಂತಿದೆ. ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಯು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಮಾಡಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.

