1.ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ
ಕಾಡು-ಮೇಡು ಅಲೆದು ಕುರಿ ಮೇಯಿಸುವ ಕುರಿಗಾಹಿಯ ಪುತ್ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ರ‍್ಯಾಂಕ್ ಪಡೆದಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಎಮಗೆ ಗ್ರಾಮದ ಸಿದ್ದಪ್ಪ ಹಾಗೂ ಬಾಳವ್ವ ಡೋಣಿ ದಂಪತಿಗಳ ತೃತಿಯ ಸುಪುತ್ರ ಬೀರಪ್ಪ ಸಿದ್ದಪ್ಪ ಡೋಣಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಬೀರಪ್ಪ ಸಿದ್ದಪ್ಪ ಡೋಣಿ ಕುರಿ ಕಾಯುತ್ತಿರುವಾಗಲೇ ಯುಪಿಎಸ್ಸಿ ಫಲಿತಾಂಶ ಬಂದಿದ್ದು, ತಾನು ಪಾಸಾದ ಸುದ್ದಿ ತಿಳಿದು ಕುಣಿದು ಕುಪ್ಪಳಿಸಿದ್ದಾರೆ.
2.ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್ಗೆ ಅಮಿತ್ ಶಾ ಭೇಟಿ
ಉಗ್ರರು ಮಂಗಳವಾರ ದಾಳಿ ನಡೆಸಿದ್ದ ಕಾಶ್ಮೀರದ ಪಹಲ್ಗಾಮ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ. ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು
3.ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಯಿದೆ: ಸತೀಶ್ ಜಾರಕಿಹೊಳಿ
ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾಕರಿಂದ ನಡೆದಿರುವ 28 ಅಮಾಯಕರ ಮಾರಣಹೋಮವನ್ನು , ನಮ್ಮ ಸರ್ಕಾರ ಘಟನೆಯನ್ನು ಖಂಡಿಸುತ್ತದೆ ,ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರ ನಡೆಸುತ್ತಿರಲಿ, ಈ ಸಂದರ್ಭದಲ್ಲಿ ತಮ್ಮ ಸರ್ಕಾರ ಅದರ ಜೊತೆ ನಿಲ್ಲುತ್ತದೆ, ಉಗ್ರರು ಯಾರು, ಎಲ್ಲಿಂದ ಬಂದಿದ್ದರು ಮತ್ತು ಅವರ ಉದ್ದೇಶ ಏನಾಗಿತ್ತು ಅನ್ನೋದನ್ನು ಕೇಂದ್ರ ಸರ್ಕಾರ ಪತ್ತೆ ಮಾಡುತ್ತದೆ, ಕ್ರಮ ತೆಗೆದುಕೊಳ್ಳುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
4.ಕಾಶ್ಮೀರದಲ್ಲಿ Article 370 ತೆಗೆದಿದ್ದೇ ಪಹಲ್ಗಾಮ್ ನರಮೇಧಕ್ಕೆ ಕಾರಣ
ಪಹಲ್ಗಾಮ್ ನಲ್ಲಿ ಹಿಂದೂಗಳ ಮೇಲಿನ ನರವೇಧಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದಿರುವುದೇ ಕಾರಣ ಎಂದು ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಆರ್ಟಿಕಲ್ 370 ತೆಗೆಯೋದಕ್ಕೂ ಮೊದಲು ಯೋಚನೆ ಮಾಡಬೇಕಿತ್ತು ಎಂದು ಹೇಳಿದ್ದಾರೆ
5.ಉಗ್ರ ಸಂಘಟನೆ ಸದೆಬಡಿಯಲು ಕೇಂದ್ರದ ಜೊತೆ ನಿಲ್ಲುತ್ತೇವೆ
ಕಾಶ್ಮೀರದಲ್ಲಿನ ಉಗ್ರರ ದಾಳಿ ಇಡೀ ಪ್ರಪಂಚಕ್ಕೆ ದೊಡ್ಡ ಆಘಾತ. ಈ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ಉಗ್ರರು ಹಾಗೂ ಭಯೋತ್ಪಾದಕ ಸಂಘಟನೆಗಳನ್ನು ಸದೆಬಡಿಯಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
6.ಮಲಯಾಳಂ ನಟ ಶೈಮ್ ಟಾಮ್ ಚಾಕೊಗೆ ಕೊನೆ ಎಚ್ಚರಿಕೆ
ಮಲಯಾಳಂ ಚಿತ್ರನಟ ಶೈನ್ ಟಾಮ್ ಚಾಕೊಗೆ ಕೇರಳ ಸಿನಿಮಾ ಕಲಾವಿದರ ಸಂಘ ಕೊನೆಯ ಎಚ್ಚರಿಕೆ ನೀಡಿದೆ. ಶೈನ್ ಟಾಮ್ ಚಾಕೊ ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದರು. ಅದರ ಜೊತೆಗೆ ನಟಿಯೊಬ್ಬರು ಶೈನ್ ವಿರುದ್ಧ ದುರ್ವರ್ತನೆಯ ಆರೋಪವನ್ನೂ ಸಹ ಮಾಡಿದ್ದರು. ಇದೇ ಕಾರಣಕ್ಕೆ ಚಾಕೊಗೆ ಕೊನೆಯ ಎಚ್ಚರಿಕೆ ನೀಡಲಾಗಿದೆ.
7.ಕರ್ನಾಟಕದ ಜಾತಿ ಸಮೀಕ್ಷೆಯನ್ನು ಮರುಪರಿಶೀಲಿಸುವ ಅಗತ್ಯವಿದೆ
2015 ರ ದತ್ತಾಂಶವನ್ನು ಆಧರಿಸಿದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಬಗ್ಗೆ ಕರ್ನಾಟಕ ಸರ್ಕಾರ ಅಡಕತ್ತರಿಗೆ ಸಿಲುಕಿರುವಂತೆಯೇ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಕರ್ನಾಟಕದ ಜಾತಿ ಸಮೀಕ್ಷೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
8.ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಾಜಿ ಎಂಎಲ್ಸಿಯ ಸಂಬಂಧಿಯಿಂದ ಫೈರಿಂಗ್
ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಕಲ್ಲು ಕ್ವಾರಿ ಕ್ರಷರ್‌ಗೆ ರಸ್ತೆ ನಿರ್ಮಾಣಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಾಜಿ ಶಾಸಕ ವೈ.ಎ. ನಾರಾಯಣಸ್ವಾಮಿ ಅವರ ಸಂಬಂಧಿ ಫೈರಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಭೇಟಿ ನೀಡಿದ್ದಾರೆ.
9.ಪಹಲ್ಗಾಮ್ ಹತ್ಯಾಕಾಂಡ ಖಂಡಿಸಿದ ಶಾರುಖ್ ಖಾನ್
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಿಂದ 28 ಮಂದಿ ಜೀವ ಕಳೆದುಕೊಂಡಿದ್ದಾರೆ. ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯಾಕಾಂಡ ನಡೆಸಲಾಗಿದ್ದು ಈ ಘಟನೆಯಲ್ಲಿ ಅಮಾಯಕರು ಜೀವ ಕಳೆದುಕೊಂಡಿದ್ದಾರೆ ನಟ ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
10.ಕ್ರಿಕೆಟರ್ ಶರತ್ ಜೊತೆ ನಟಿ ಅರ್ಚನಾ ಕೊಟ್ಟಿಗೆ ಮದುವೆ
ಕನ್ನಡ ಚಿತ್ರರಂಗದ ನಟಿ ಅರ್ಚನಾ ಕೊಟ್ಟಿಗೆ ಮತ್ತು ಕ್ರಿಕೆಟರ್ ಬಿ.ಆರ್. ಶರತ್ ಅವರ ಅದ್ದೂರಿ ವಿವಾಹ ಬೆಂಗಳೂರಿನಲ್ಲಿ ನಡೆಯಿತು.ಆರ್‌ಸಿಬಿ ಮತ್ತು ಜಿಟಿ ತಂಡಗಳ ಆಟಗಾರರು ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡರು. ಈ ಮದುವೆಯ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.