1.ಓದಿದ್ದು 4ನೇ ತರಗತಿ, ಮಾಡಿದ್ದು 11 ಮಂದಿಗೆ ನಂಬಿಸಿ 14 ಲಕ್ಷ ರೂ
ಕಲಬುರಗಿಯಲ್ಲಿ ನಕಲಿ ಸರ್ಕಾರಿ ನೇಮಕಾತಿ ಆದೇಶಗಳನ್ನು ನೀಡಿ 14 ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಗೇಶ್ ಮತ್ತು ಅಭಿಷೇಕ್ ಎಂಬ ಆರೋಪಿಗಳು ಅಮಾಯಕ ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಿದ್ದರು. ಪೊಲೀಸರು ನಕಲಿ ನೇಮಕಾತಿ ಆದೇಶಗಳು, ಮೊಬೈಲ್ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.
2.ಬಸನಗೌಡ ಯತ್ನಾಳ್ ಒಂದ್ಯಾಕೆ ನಾಲ್ಕು ಹೊಸ ಪಕ್ಷ ಕಟ್ಟಲಿ
ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಶಾಸಕ ನರಸಿಂಹ ನಾಯಕ್ (ರಾಜುಗೌಡ), ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಿಶ್ರ ಭಾವನೆಗಳನ್ನು ವ್ಯಕ್ತಪಡಿಸಿದರು. ಅವರಿಗೆ ಈಗ ಪಕ್ಷದ ಕಟ್ಟಪಾಡುಗಳಿಲ್ಲ, ಸಂಪೂರ್ಣವಾಗಿ ಸ್ವತಂತ್ರರಾಗಿರುವುದರಿಂದ ಏನು ಬೇಕಾದರು ಮಾತಾಡಬಹುದು, ಏನಾದರೂ ಸಲಹೆ ಸೂಚನೆ ನೀಡಬೇಕೆಂದರೂ ಆಗದು, ಹೊಸ ಪಕ್ಷ ಕಟ್ಟುವುದೇ ಅವರ ಮುಂದಿನ ಗುರಿಯಾಗಿದ್ದರೆ, ಒಂದ್ಯಾಕೆ 4 ಪಕ್ಷಗಳನ್ನು ಕಟ್ಟಲಿ ಎಂದು ರಾಜುಗೌಡ ಹೇಳಿದರು.
3.ರನ್ಯಾ ರಾವ್ ಡಿಆರ್ಐಗೆ ಸಿಕ್ಕ ಡಿಜಿಟಲ್ ಸಾಕ್ಷಿಯಲ್ಲಿ ಸ್ಮಗ್ಲಿಂಗ್ ರಹಸ್ಯ ಬಯಲು
ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮೂರನೇ ಆರೋಪಿ ಸಾಹಿಲ್ ಜೈನ್ ವಿಚಾರಣೆಯಿಂದ ಹಲವು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ. ಡಿಆರ್ಐ ಅಧಿಕಾರಿಗಳು ಪಡೆದ ಡಿಜಿಟಲ್ ಸಾಕ್ಷ್ಯಗಳು ಚಿನ್ನ ಕಳ್ಳಸಾಗಣೆಯ ರಹಸ್ಯವನ್ನು ಬಯಲು ಮಾಡಿವೆ. ಸಾಹಿಲ್ ಜೈನ್ ಚಿನ್ನದ ಮಾರಾಟಕ್ಕೆ ಸಹಾಯ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಮತ್ತು ಹಲವು ಬಾರಿ ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ ಎಂಬುದು ತಿಳಿದುಬಂದಿದೆ.
4.SBI ಬ್ಯಾಂಕ್ ದರೋಡೆ: ಪಾಳು ಬಾವಿಯಲ್ಲಿ 17 ಕೆಜಿ ಚಿನ್ನ
ದಾವಣಗೆರೆಯ ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬರೋಬ್ಬರಿ ಆರು ತಿಂಗಳ ಬಳಿಕ ಚಿನ್ನಾಭರಣ ಸಹಿತ ಅರೋಪಿಗಳ ಬಂಧನವಾಗಿದೆ. ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ವಿಚಾರ ಬಯಲಾಗಿದ್ದು, ಚಿನ್ನ ಮುಚ್ಚಿಟ್ಟಿದ್ದು, ದರೋಡೆಗೆ ಕಾರಣ, ಸಂಚು ಎಲ್ಲವನ್ನೂ ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
5.ಯತ್ನಾಳ್ ಹಿಂದುತ್ವದ ಮೇಲೆ ರಾಜಕಾರಣ ಮಾಡ್ತಾರೆ
ಕಾಂಗ್ರೆಸ್ ಗೆ ಯತ್ನಾಳ್ ಬರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೈ ಶಾಸಕ ಮಹೇಂದ್ರ ತಮ್ಮನವರ ಕಾಂಗ್ರೆಸ್ ಪಕ್ಷಕ್ಕೂ ಯತ್ನಾಳಗೂ ಆಗಿ ಬರಲ್ಲ.ಯತ್ನಾಳ್ ಹಿಂದುತ್ವದ ಮೇಲೆ ರಾಜಕಾರಣ ಮಾಡ್ತಾರೆ.ಕಾಂಗ್ರೆಸ್ ಎಲ್ಲಾ ಸರ್ವ ಧರ್ಮಗಳನ್ನ ಒಳಗೊಂಡು ರಾಜಕಾರಣ ಮಾಡುತ್ತದೆ.ಅದರ ಬಗ್ಗೆ ನನಗೆ ಮಾಹಿತಿಯಿಲ್ಲ, ಹೈ ಕಮಾಂಡ್ ದಲ್ಲಿ ಏನ ಚರ್ಚೆ ಆಗಿದೆ ಅಂತ ನನಗೆ ಗೊತ್ತಿಲ್ಲ ಎಂದು ತಿಳಿಸಿದರು
6.ಭಾರತದಲ್ಲಿ ಖಾಸಗಿ ಸೆಕ್ಟರ್ನಿಂದ ಈ ರನ್ವೇ ತಯಾರು
ಮಹಾರಾಷ್ಟ್ರದ ನಾಗಪುರ್ನಲ್ಲಿ ಸೋಲಾರ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಸಂಸ್ಥೆ ಮಿಲಿಟರಿ ಡ್ರೋನ್ ಟೆಸ್ಟಿಂಗ್ ರನ್ವೇ ಮತ್ತು ಸ್ಫೋಟಕ ಡ್ರೋನ್ಗಳ ಪರೀಕ್ಷಾ ಸೌಲಭ್ಯಗಳ ನಿರ್ಮಾಣವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
7.ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ
ಬೆಲೆಯೇರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದ್ಯಂತ ಹೋರಾಟ ನಡೆಸುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏಪ್ರಿಲ್ 2ರಿಂದ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ನಮ್ಮ ಪಕ್ಷದ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗುತ್ತಾರೆ. ಏಪ್ರಿಲ್ 5ರಂದು ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಧರಣಿ ಮಾಡುತ್ತೇವೆ ಎಂದರು.
8.ಮೊನಾಲಿಸಾ ಜತೆ ಸಿನಿಮಾ ಮಾಡುತ್ತಿದ್ದ ನಿರ್ದೇಶಕನ ಮೇಲೆ ರೇಪ್ ಕೇಸ್
ಕುಂಭಮೇಳದ ವೈರಲ್ ಆದ ಹುಡುಗಿ ಮೊನಾಲಿಸಾ ಜೊತೆ ನಿರ್ದೇಶಕ ಸನೋಜ್ ಮಿಶ್ರಾ ಅವರು ಸಿನಿಮಾ ಮಾಡುತ್ತಿದ್ದರು. ಆದರೆ ಅವರ ಮೇಲೆ ಗಂಭೀರ ಆರೋಪ ಎದುರಾಗಿದೆ. ಝಾನ್ಸಿ ಮೂಲದ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದಲ್ಲಿ ಸನೋಜ್ ಮಿಶ್ರಾ ಅವರನ್ನು ದೆಹಲಿಯಲ್ಲಿ ಅರೆಸ್ಟ್ ಮಾಡಲಾಗಿದೆ.
9.ಮಧೂರು ಮಹಾಗಣಪತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ!
ಕೇರಳ ರಾಜ್ಯದ ಪುರಾಣ ಪ್ರಸಿದ್ಧ ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆ ಮಾಡಿದೆ. ಮಾರ್ಚ್ 27 ರಿಂದ ಏಪ್ರಿಲ್ 7 ರವರೆಗೆ ಈ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮತ್ತು ಮೂಡಪ್ಪ ಸೇವೆ ನೆರವೇರಲಿದ್ದು, ಭಾರೀ ಸಂಖ್ಯೆಯ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುವ ಮೂಲಕ ದೇವರಿಗೆ ಸೇವೆ ಸಲ್ಲಿಸುತ್ತಿದ್ದಾರೆ.
10.ಮತ್ತೆ ಬಿಎಸ್‌ವೈ ವಿರುದ್ಧ ಯತ್ನಾಳ್ ವಾಗ್ದಾಳಿ
ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ದಿನೇ ದಿನೇ ವಾಗ್ದಾಳಿ ನಡೆಸುತ್ತಾ ಪಕ್ಷಕ್ಕೆ ಡ್ಯಾಮೆಜ್ ಉಂಟು ಮಾಡುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಹೈಕಮಾಂಡ್ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿತ್ತು. ಇದಾದ ಬಳಿಕ ಬಿಜೆಪಿ ವಿರುದ್ಧ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

