By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಟೊಮ್ಯಾಟೋ ಬೆಲೆ ದಿಢೀರ್ ಏರಿಕೆ, ಗ್ರಾಹಕರು ಕಂಗಾಲು , ರೈತರಲ್ಲಿ ಸಂತಸ
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ರಾಜ್ಯ-Karnataka > ಟೊಮ್ಯಾಟೋ ಬೆಲೆ ದಿಢೀರ್ ಏರಿಕೆ, ಗ್ರಾಹಕರು ಕಂಗಾಲು , ರೈತರಲ್ಲಿ ಸಂತಸ
ರಾಜ್ಯ-KarnatakaLatest

ಟೊಮ್ಯಾಟೋ ಬೆಲೆ ದಿಢೀರ್ ಏರಿಕೆ, ಗ್ರಾಹಕರು ಕಂಗಾಲು , ರೈತರಲ್ಲಿ ಸಂತಸ

Tomato prices soar, consumers in distress, farmers happy

Published November 26, 2025
Share
3 Min Read
SHARE

ಬೆಂಗಳೂರು: ದುಬಾರಿ ದುನಿಯಾದಲ್ಲಿ ಈಗ ತರಕಾರಿ, ಬೇಳೆ ಕಾಳು, ಮೊಟ್ಟೆ, ಖಾದ್ಯ ತೈಲ ಸೇರಿದಂತೆ ಬಹುತೇಕ ಆಹಾರ ಉತ್ಪನ್ನಗಳ ಬೆಲೆಗಳು ಗಗನಕ್ಕೇರಿವೆ. ಸೆಪ್ಟೆಂಬರ್–ಅಕ್ಟೋಬರ್ ತಿಂಗಳಲ್ಲಿ ಸುರಿದ ಅತಿ ಮಳೆಯಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಟೊಮ್ಯಾಟೋ ಇಳುವರಿ ಶೇ.50 ರಷ್ಟು ಕುಸಿದಿರುವುದು ಪೂರೈಕೆ ಕಡಿಮೆಯಾಗಲು ಹಾಗೂ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

15 ದಿನಗಳ ಹಿಂದೆ ಟೊಮೆಟೋ ಬೆಲೆ ಕುಸಿತಗೊಂಡಿದ್ದಾಗ ರೈತರು ಬೆಳೆದ ಉತ್ಪನ್ನಕ್ಕೆ ಬೆಲೆ ಸಿಗದೆ, ಹಲವರು ತಮ್ಮ ಬೆಳೆಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವು ರೈತರು ತೋಟದಲ್ಲೇ ಟೊಮೆಟೋ ನಾಶವಾಗಲು ಬಿಟ್ಟಿದ್ದರು. ಆದರೆ ಇದೀಗ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ತೀವ್ರ ಏರಿಕೆ ಕಂಡಿದ್ದು, ಬೆಳೆಯು ಉತ್ತಮ ದರ ಪಡೆಯುತ್ತಿರುವ ಹಿನ್ನೆಲೆ ಟೊಮೆಟೋ ಬೆಳೆಗಾರರಲ್ಲಿ ಸಂತಸ ಮೂಡಿದೆ.

ಏಷ್ಯಾದ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಯಾದ ಕೋಲಾರ ಎಪಿಎಂಸಿಯಲ್ಲಿ ಜೂನ್‌ರಿಂದ ಸೆಪ್ಟೆಂಬರ್ ವರೆಗೆ ದೇಶದ ಹೆಚ್ಚಿನ ಭಾಗಕ್ಕೆ ಪೂರೈಕೆ ನಡೆಯುತ್ತದೆ. ಈ ಬಾರಿ ಪೂರೈಕೆ ಶೇ.50ರಷ್ಟು ಕಡಿಮೆಯಾಗಿದೆ ಎಂದು ಟೊಮೆಟೋ ವರ್ತಕರು ತಿಳಿಸಿದ್ದಾರೆ. ಕೋಲಾರ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಲ್ಲೂ ಮಳೆ ಹಾವಳಿಯಿಂದ ಟೊಮೆಟೋ ಬೆಳೆ ಹಾನಿಯಾಗಿದೆ.

ಉತ್ತರ ಭಾರತದಲ್ಲಿ ಭಾರಿ ಮಳೆ ಹಾಗೂ ಸಾರಿಗೆ ತೊಂದರೆಗಳಿಂದಾಗಿ ಅಲ್ಲಿ ಟೊಮೆಟೋ ಬೇಡಿಕೆ ಹೆಚ್ಚಾಗಿದ್ದು, ಇದೇ ಸಂದರ್ಭದಲ್ಲಿ ಕರ್ನಾಟಕದ ತರಕಾರಿ ದರಗಳು ಇನ್ನಷ್ಟು ಏರಿಕೆಗೆ ಒಳಗಾಗಿವೆ. ಕಳೆದ 10–15 ದಿನಗಳಲ್ಲಿ ಟೊಮೆಟೋ ಬೆಲೆ ಶೇ.50ರಷ್ಟು ಏರಿಕೆಯಾಗಿದೆ ಎಂದು ಬೆಂಗಳೂರು ಎಪಿಎಂಸಿ ಟೊಮ್ಯಾಟೋ ವರ್ತಕ ಅಂಜನಪ್ಪ ತಿಳಿಸಿದ್ದಾರೆ.

ಕೋಲಾರ ಎಪಿಎಂಸಿ ಮಾರುಕಟ್ಟೆಗೆ ದಿನಕ್ಕೆ ಸుమಾರು 1.50 ಲಕ್ಷ ಬಾಕ್ಸ್ ಟೊಮೆಟೋ ಬರುತ್ತಿದ್ದು, ಇದರಲ್ಲಿ ತಮಿಳುನಾಡಿಗೆ ಮಾತ್ರವೇ 60–70 ಸಾವಿರ ಲಾರಿಗಳಷ್ಟು ರವಾನೆಯಾಗುತ್ತಿದೆ. ಪ್ರಸ್ತುತ ಕೋಲಾರ ಎಪಿಎಂಸಿ ಯಲ್ಲಿ 15 ಕೆಜಿ ಸಾಮರ್ಥ್ಯದ ಒಂದು ಬಾಕ್ಸ್ ಉತ್ತಮ ಗುಣಮಟ್ಟದ್ದು ₹800, ಮಧ್ಯಮ ಗುಣಮಟ್ಟದ್ದು ₹700ಕ್ಕೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದರೂ, ಗ್ರಾಹಕರಿಗೆ ಇದು ಭಾರವಾಗುತ್ತಿದೆ.

ಬೆಂಗಳೂರು ಎಪಿಎಂಸಿ ಗೆ ಪ್ರತಿ ದಿನ 12 ಕೆಜಿ ಬಾಕ್ಸ್ 50–60 ಸಾವಿರ ಪೂರೈಕೆಯಾಗುತ್ತಿದ್ದು, ಒಳ್ಳೆಯ ಗುಣಮಟ್ಟದ ಟೊಮೆಟೋ ದರ ಕೆಜಿಗೆ ₹50, ಮಧ್ಯಮ ಗುಣಮಟ್ಟದ್ದು ₹45, ಚಿಲ್ಲರೆ ಮಾರುಕಟ್ಟೆಯಲ್ಲಿ ₹65–70 ರವರೆಗೆ ಮಾರಾಟವಾಗುತ್ತಿದೆ.

ಅಕ್ಟೋಬರ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳೆ ನಾಶವಾದುದು, ಪೂರೈಕೆ ಕೊರತೆ, ಮದುವೆ ಸೀಸನ್ ಹಾಗೂ ವರ್ಷಾಂತ್ಯದ ಹಬ್ಬಗಳ ಬೇಡಿಕೆ—all factors ಸೇರಿ ಟೊಮೆಟೋ ದರ ಹೆಚ್ಚಾಗುತ್ತಿರುವುದಕ್ಕೆ ಕಾರಣವೆಂದು ಕೋಲಾರ ಟೊಮೆಟೋ ವ್ಯಾಪಾರಿ ಬಾಲಾಜಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಬೇಡಿಕೆ ಇನ್ನೂ ಹೆಚ್ಚಾಗುವ ಸೂಚನೆಯಿದ್ದು, ಟೊಮೆಟೋ ದರ ₹100 ಗಡಿ ದಾಟಿದರೂ ಆಶ್ಚರ್ಯವಿಲ್ಲ ಎಂದು ವ್ಯಾಪಾರಿಗಳು ಅಂದಾಜು ವ್ಯಕ್ತಪಡಿಸಿದ್ದಾರೆ.

ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ
: ಮೊದಲೇ ತರಕಾರಿ ಬೆಲೆ ಹೆಚ್ಚಾಗಿದ್ದು,ಇದರ ನಡುವೆ ಮೊಟ್ಟೆ ಬೆಲೆಯೂ ಹೆಚ್ಚಾಗುತ್ತಿರುವುದು ಸಾಮಾನ್ಯ ಜನರ ಮೇಲೆ ತೀವ್ರ ಪ್ರಭಾವವನ್ನು ಉಂಟು ಮಾಡುತ್ತಿದೆ. ಮೀನು ಮಟನ್ ಚಿಕನ್ ಗಿಂತ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ವಸ್ತು ಎಂದರೆ ಅದು ಮೊಟ್ಟೆ ಇದೀಗ ಬಡವರು ದುಬಾರಿ ಮೊಟ್ಟೆ ಖರೀದಿಸಿ ತಿನ್ನುವುದು ಕಷ್ಟವಾಗಿ ಬಿಟ್ಟಿದೆ.

ಉತ್ಪಾದನೆಯಲ್ಲಿ ಶೇ,10 ರಷ್ಟು ಕಡಿಮೆಯಾಗಿರುವ ಕಾರಣ ಮತ್ತು ದುಬೈ ಏಪ್ರಿಕ ಶ್ರೀಲಂಕಾ ಹಾಗೂ ಓಮನ್ ದೇಶಗಳಿಗೆ ದಿನಕ್ಕೆ ಅಂದಾಜು 50 60 ಲಕ್ಷ ಮೊಟ್ಟೆ ರಫ್ತುಗು ತ್ತಿದೆ. ಈ ಹಿನ್ನೆಲೆಯಲ್ಲಿ ಮೊಟ್ಟೆ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ. ಸದ್ಯ ತರಕಾರಿ ಬೆಲೆಯೂ ಹೆಚ್ಚಳವಾಗುತ್ತಿದ್ದು, ಇದರ ನಡುವೆ ಮೊಟ್ಟೆ ಬೆಲೆಯೂ ಹೆಚ್ಚಾಗುತ್ತಿರುವುದು ಸಾಮಾನ್ಯ ಜನರ ಮೇಲೆ ತೀವ್ರ ಪ್ರಭಾವವನ್ನು ಉಂಟು ಮಾಡುತ್ತಿದೆ.

ಸಾಮಾನ್ಯ ಜನರಿಗೆ ಎಂದು ಕೈಗೆಟುಕುವ ಬೆಲೆಯಲ್ಲಿ ಸಿಗುವ ವಸ್ತು ಎಂದರೆ ಅದು ಮೊಟ್ಟೆಯೊಂದೆ. ಹೆಚ್ಚು ಎಂದರೆ ಮೊಟ್ಟೆ ಬೆಲೆ 6 ರಿಂದ 6.50 ರೂ ಇರುತ್ತೆ. ಈ ಕಾರಣ ದಿಂದಲೇ ನೂರಾರು ರೂಪಾಯಿ ಕೊಟ್ಟು ಮಾಂಸ ಖರೀದಿ ಮಾಡುವ ಬದಲು ಹಲವರು ಮೊಟ್ಟೆ ಖರೀದಿ ಮಾಡುತ್ತಾರೆ.

You Might Also Like

ಅಂದು “ಕೈ” ವಿಶ್ವದಿಂದ ಸಹಾಯ ಕೇಳಿತ್ತು, ಈಗ ಭಾರತ ವಿಶ್ವಕ್ಕೆ ಸಹಾಯ ಮಾಡುತ್ತಿದೆ: ಮೋದಿ

ಹಳೇ ಪ್ರಿಯತಮೆಗೆ ವಿಶ್‌ ಮಾಡಿ ಕೊಲೆಯಾದ ಯುವಕ : ಭಾವಿ ಪತಿ, ಯುವತಿ ಸಹೋದರನಿಂದ ಹತ್ಯೆ

ಟಿಬಿ ಡ್ಯಾಂನ ಕ್ರಸ್ಟ್‌ಗೇಟ್‌ಗೆ ದುರಸ್ತಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗೆ ಬಹುಮಾನ

ಜಪಾನ್ ಪ್ರಧಾನಿ ಜೊತೆ ಬುಲೆಟ್​ ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ

ಆ್ಯಕ್ಷನ್ ದೃಶ್ಯ ಚಿತ್ರೀಕರಣದ ವೇಳೆ ಕಾಲು ಮುರಿದುಕೊಂಡ ಊರ್ವಶಿ ರೌಟೇಲಾ – ಆಸ್ಪತ್ರೆಗೆ ದಾಖಲು

TAGGED:Tomato Prices
Share This Article
Facebook Copy Link Print
Previous Article ರಾಜ್ಯದ 3.50 ಲಕ್ಷ ಕೃಷಿ ಪಂಪ್‌ಸೆಟ್‌ಗಳು ಸಕ್ರಮ : ಕೆ.ಜೆ. ಜಾರ್ಜ್
Next Article ಅಮೆರಿಕದ ಶ್ವೇತ ಭವನದ ಬಳಿ ಗುಂಡಿನ ಸದ್ದು, ಇಬ್ಬರು ನ್ಯಾಷನಲ್​ ಗಾರ್ಡ್​​ಗಳ ಮೇಲೆ ಫೈರಿಂಗ್
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ರಾಜ್ಯ ರಾಜಕೀಯದಲ್ಲಿ ಮತ್ತೆ ರೆಸಾರ್ಟ್‌ ರಾಜಕೀಯ..?!
ರಾಜ್ಯ-Karnataka
February 11, 2026
ಇತ್ತ ಬಜೆಟ್‌ ತಯಾರಿಯಲ್ಲಿ ಸಿಎಂ ಬ್ಯುಸಿ, ಅತ್ತ ದೆಹಲಿಯಲ್ಲಿ ಸಿಎಂ ಕುರ್ಚಿಗಾಗಿ ಡಿಸಿಎಂ ರಣತಂತ್ರ
ರಾಜಕೀಯ | Politics
February 11, 2026
ಗನ್ ಹಿಡಿದು ಡಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್
ರಾಜ್ಯ-Karnataka
February 11, 2026
ದೇಶದ ವಿವಿಧ ಭಾಗಗಳಲ್ಲಿ ಮಕ್ಕಳು ನಾಪತ್ತೆ ಪ್ರಕರಣ : ತನಿಖೆಗೆ ಸುಪ್ರೀಂ ಸೂಚನೆ
ರಾಷ್ಟ್ರೀಯ-National
February 11, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up