ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಲ್ಕಿ
ದೇಗುಲ ರಥೋತ್ಸವದ ವೇಳೆ ತೇರು ಮುರಿದು ಅವಘಡ
ಅಪಾಯದಿಂದ ಪಾರಾದ ಅರ್ಚಕರು ,ಭಕ್ತರು
ಘಟನೆ ಸಂಬಂಧ ಭಕ್ತ ಸಮೂಹದಲ್ಲಿ ಆತಂಕ ಸೃಷ್ಟಿ
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಪ್ರಸಿದ್ಧ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲ ರಥೋತ್ಸವ ವೇಳೆ ತೇರು ಮುರಿದು ಅವಘಡ ಸಂಭವಿಸಿದೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಉತ್ಸವದ ಅಂಗವಾಗಿ ನಡೆಯುತ್ತಿದ್ದ ರಥೋತ್ಸವದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿದೆ.
ತೇರಿನ ಮೇಲ್ಬಾಗ ಕುಸಿಯುವ ವೇಳೆ ಅರ್ಚಕರು ತೇರಿನಲ್ಲೇ ಇದ್ದರೂ ಅದೃಷ್ಟವಶಾತ್ ಪಾರಾಗಿದ್ದಾರೆ. ಜೊತೆಗೆ ಸಾರ್ವಜನಿಕರಿಗೂ ಯಾವುದೇ ಗಂಭೀರ ಅನಾಹುತಗಳಾಗಿಲ್ಲ. ತಡರಾತ್ರಿ ರಾತ್ರಿ 1:45ರ ಸುಮಾರಿಗೆ ಘಟನೆ ಸಂಭವಿಸಿದ್ದು, ಇದರಿಂದ ಭಕ್ತ ಸಮೂಹದಲ್ಲೂ ಆತಂಕ ಸೃಷ್ಟಿಯಾಗಿದೆ.
ಬಳಿಕ ಚಂದ್ರಮಂಡಲ ತೇರಿನಲ್ಲಿ ದೇವರ ಉತ್ಸವ ಮುಂದುವರಿಯಿತು. ಸಾವಿರಾರೂ ಭಕ್ತರು ಪಾಲ್ಗೊಂಡಿದ್ದ ರಥೋತ್ಸವದ ವೇಳೆ ಈ ಘಟನೆ ನಡೆದಿದ್ದು. ಯಾರಿಗೂ ಯವುದೇ ರೀತಿ ಅಪಾಯವಾಗದಂತೆ ದೇವಿಯೇ ಕಾಪಾಡಿದ್ದಾಳೆ ಎಂದು ಭಕ್ತರ ನಂಬಿಕೆ. ಅಲ್ಲಿ ನೆರೆದಿದ್ದ ಭಕ್ತರು ತೇರು ಬಿದ್ದ ದೃಶ್ಯವನ್ನು ಕಂಡು ಆತಂಕಗೊಂಡಿದ್ದರು. ಆದರೆ ಅದೃಷ್ಟವಶಾತ್ ಈ ಘಟನೆಯಿಂದ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ

