ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ಡ್ಯುಯೇಟ್ ಹಾಡೋಕೆ ತೃಪ್ತಿ ರೆಡಿಯಾಗಿದ್ದು, ಈ ಹಿಂದೆ ಅವರು ಪುಷ್ಪ ದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆದ ಬಳಿಕ ಈ ಸುದ್ದಿ ಹೊರ ಬಿದಿದ್ದು, ಅಭಿಮಾನಿಗಳಿಗೆ ಖುಷಿ ತಂದು ಕೊಟ್ಟಿದೆ.
ತೃಪ್ತಿ ರಣಬೀರ್ ಕಪೂಋ ನಟನೆಯ “ಅನಿಮಲ್” ಚಿತ್ರದಲ್ಲಿ ಸಕ್ಕತ್ ಹಾಟ್ ಹಾಗಿ ಕಾಣಿಸಿಕೊಂಡು ಎಲ್ಲರ ಮನಸ್ಸು ಗೆದಿದ್ದರು. ನಂತರ ಪುಷ್ಪ 2 ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕುತ್ತಾರೆ ಎಂಬ ಸುದ್ದಿಗಳಳು ಹರಿದಾಡುತ್ತಿದ್ದವು. ಇದೀಗ ಅವರು ಬಿಟೌನ್‌ನಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಭಾಸ್, ಪ್ರಶಾಂತ್ ನೀಲ್ ನಡುವೆ ಭಿನ್ನಾಭಿಪ್ರಾಯ- ಲಿಖಿತಾ ರೆಡ್ಡಿ ಸ್ಪಷ್ಟನೆ

ಬಾಲಿವುಡ್‌ನ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ (Karan Johar) ‘ಧಡಕ್” 2 ಸನಿಮಾ ಮಾಡಲು ಮುಂದಾಗಿದ್ದಾರೆ. ಸಿದ್ಧಾಂತ್ ಮತ್ತು ತೃಪ್ತಿ ಈ ಹೊಸ ಜೋಡಿಯನ್ನು ಜೊತೆಯಾಗಿಸಿ ವಿಭಿನ್ನ ಪ್ರೇಮ ಕಥೆಯನ್ನು ತೋರಿಸಲು ಹೊರಟಿದ್ದು, ಈ ಬಗ್ಗೆ ತಂಡದ ಕಡೆಯಿಂದ ಅಫಿಷಿಯಲ್ ಅನೌನ್ಸ್‌ಮೆಂಟ್ ಕೂಡ ಆಗಿದೆ. ಇದನ್ನೂ ಓದಿ: ಹೃತಿಕ್ ರೋಷನ್ ಸಿನಿಮಾದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ಮೇಲೆ ತೃಪ್ತಿಗೆ ಅದೃಷ್ಟ ಖುಲಾಯಿಸಿದೆ. ಧಡಕ್ 2ಗೆ ಚಾನ್ಸ್ ಸಿಕ್ಕಿದೆ. ಸಿದ್ಧಾಂತ್ ಕಾಣಿಸಿಕೊಳ್ತಿರುವ ತೃಪ್ತಿಗೆ ಉತ್ತಮ ಪಾತ್ರವೇ ಸಿಕ್ಕಿದೆ. ನಾಯಕಿ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಜನರಿಗೂ ಈ ಸಿನಿಮಾ ಕನೆಕ್ಟ್ ಆಗಲಿದೆಯಂತೆ. ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಕನ್ನಡದ ಹುಡುಗನ ಚಿತ್ರಕ್ಕೆ ಮೊದಲ ಬಹುಮಾನ

