ನವದೆಹಲಿ, ಮಾರ್ಚ್ 16: ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ Strait of Hormuz ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೈಲ ಹಡಗುಗಳ ಸುರಕ್ಷಿತ ಸಾಗಣೆಗೆ United States ಹಲವು ದೇಶಗಳ ನೆರವು ಕೇಳಿದೆ. Iran ಮತ್ತು ಅಮೆರಿಕ ನಡುವೆ ಯುದ್ಧ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಈ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದು, ಕೆಲವೇ ಕೆಲವು ತೈಲ ಹಡಗುಗಳು ಮಾತ್ರ ಅಲ್ಪ ಪ್ರಮಾಣದಲ್ಲಿ ಸಂಚರಿಸುತ್ತಿವೆ. ಇದರ ಪರಿಣಾಮವಾಗಿ ಜಾಗತಿಕವಾಗಿ ತೈಲದ ಬೆಲೆ ಗಗನಕ್ಕೇರುತ್ತಿದೆ.
ಇದೀಗ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹಡಗುಗಳನ್ನು ಸಾಗಿಸಲು ಬಿಡುವುದಿಲ್ಲ ಎಂದು ಇರಾನ್ ಎಚ್ಚರಿಕೆ ನೀಡಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ಮೊದಲಿನಿಂದ ತನ್ನ ನೌಕಾಪಡೆಯ ರಕ್ಷಣೆಯಲ್ಲಿ ತೈಲ ಹಡಗುಗಳನ್ನು ಸಾಗಿಸಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದ ಅಮೆರಿಕ ಈಗ ಇತರ ರಾಷ್ಟ್ರಗಳ ಸಹಾಯವನ್ನು ಕೂಡ ಕೇಳುವಂತಾಗಿದೆ. ವರದಿಗಳ ಪ್ರಕಾರ India ಸೇರಿದಂತೆ ಕೆಲವು ಪ್ರಮುಖ ರಾಷ್ಟ್ರಗಳ ಸಹಕಾರವನ್ನು ಪಡೆಯಲು ಅಮೆರಿಕ ಯೋಜಿಸುತ್ತಿದೆ.
ಅಮೆರಿಕದ ಇಂಧನ ಕಾರ್ಯದರ್ಶಿ Chris Wright ಅವರು ಈ ಕುರಿತು ಮಾತನಾಡಿ, China, Japan, France, Australia, United Kingdom, South Korea ಹಾಗೂ NATO ಸದಸ್ಯ ರಾಷ್ಟ್ರಗಳನ್ನು ಹಾರ್ಮುಜ್ ಜಲಸಂಧಿಯಲ್ಲಿ ಭದ್ರತೆ ಒದಗಿಸಲು ಕೇಳಲಾಗಿದೆ ಎಂದು ತಿಳಿಸಿದ್ದಾರೆ.
ಅವರ ಪ್ರಕಾರ ಕೆಲ ದೇಶಗಳು ಅಮೆರಿಕದ ಮನವಿಗೆ ಒಪ್ಪಿಗೆ ಸೂಚಿಸಿದ್ದರೂ, ಕೆಲವು ರಾಷ್ಟ್ರಗಳು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ತಮ್ಮ ನೌಕಾಪಡೆಯ ಹಡಗುಗಳನ್ನು ಕಳುಹಿಸಲು ನಿರಾಕರಿಸಿರುವುದಾಗಿ ವರದಿಗಳು ತಿಳಿಸಿವೆ.
ಇದೀಗ ಭಾರತ ಸೇರಿದಂತೆ ಇನ್ನೂ ಕೆಲ ರಾಷ್ಟ್ರಗಳನ್ನು ಹಾರ್ಮುಜ್ ಜಲಸಂಧಿಯ ಭದ್ರತೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸುವ ಆಲೋಚನೆ ಅಮೆರಿಕದಲ್ಲಿದೆ. ಈ ಜಲಸಂಧಿ ಮೂಲಕ ಸಾಗುವ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತ, ಜಪಾನ್, ಕೊರಿಯಾ, ಚೀನಾ ಮತ್ತು ಥಾಯ್ಲೆಂಡ್ ಮುಂತಾದ ಏಷ್ಯನ್ ರಾಷ್ಟ್ರಗಳು ಭದ್ರತಾ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಅಮೆರಿಕ ನಿರೀಕ್ಷಿಸುತ್ತಿದೆ.
ಹಾರ್ಮುಜ್ ಜಲಸಂಧಿ ಯಾಕೆ ಮಹತ್ವದ್ದು?
Strait of Hormuz ಪರ್ಷಿಯನ್ ಕೊಲ್ಲಿ ಹಾಗೂ Arabian Sea ಅನ್ನು ಸಂಪರ್ಕಿಸುವ ಅತಿ ಪ್ರಮುಖ ಜಲಮಾರ್ಗವಾಗಿದೆ. ಇದು ಬಹಳ ಕಿರಿದಾದ ಮಾರ್ಗವಾಗಿರುವುದರಿಂದ ಹಡಗುಗಳ ಸಂಚಾರ ಅತ್ಯಂತ ಸೂಕ್ಷ್ಮವಾಗಿ ನಡೆಯುತ್ತದೆ. ಇರಾನ್ ಮೇಲೆ ಅಮೆರಿಕ ಮತ್ತು Israel ದಾಳಿಗಳ ಬಳಿಕ ಈ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.
ಕೊಲ್ಲಿ ರಾಷ್ಟ್ರಗಳ ತೈಲವನ್ನು ಜಗತ್ತಿನ ಇತರೆ ಭಾಗಗಳಿಗೆ ಸಾಗಿಸಲು ಇದೇ ಪ್ರಮುಖ ಮಾರ್ಗವಾಗಿದೆ. ಜಗತ್ತಿನ ಸುಮಾರು ಶೇ.40ರಷ್ಟು ತೈಲ ಸಾಗಾಟ ಈ ಜಲಸಂಧಿಯ ಮೂಲಕವೇ ನಡೆಯುತ್ತದೆ. ಭಾರತ ಹಾಗೂ ಚೀನಾ ಸೇರಿದಂತೆ ಹೆಚ್ಚಿನ ಏಷ್ಯನ್ ರಾಷ್ಟ್ರಗಳಿಗೆ ಅಗತ್ಯವಿರುವ ತೈಲದ ದೊಡ್ಡ ಭಾಗ ಇಲ್ಲಿಂದಲೇ ಪೂರೈಕೆಯಾಗುತ್ತದೆ. ಆದ್ದರಿಂದ ಈ ಜಲಸಂಧಿಯ ಭದ್ರತೆ ಕೇವಲ ಕೊಲ್ಲಿ ರಾಷ್ಟ್ರಗಳಿಗೆ ಮಾತ್ರವಲ್ಲದೆ, ಏಷ್ಯಾ ಹಾಗೂ ಜಾಗತಿಕ ಆರ್ಥಿಕತೆಗೆ ಸಹ ಅತ್ಯಂತ ಮಹತ್ವದ್ದಾಗಿದೆ.

