Trump vs Musk : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ನಡುವಿನ ಭಿನ್ನಾಭಿಪ್ರಾಯಗಳು ದಿನದಿಂದ ದಿನಕ್ಕೆ ಗಾಢವಾಗುತ್ತಿವೆ. ಇಬ್ಬರೂ ಪರಸ್ಪರ ಆರೋಪಗಳನ್ನು ಮಾಡುತ್ತಿರುವುದು ಹಲವರ ಗೊಂದಲಕ್ಕೂ ಕಾರಣವಾಗಿದೆ. ಇಬ್ಬರು ದಿಗ್ಗಜರ ಮಧ್ಯೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿದ್ದೇ ತಡ ಡೋನಾಲ್ಡ್ ಟ್ರಂಪ್ ಜೊತೆಗಿನ ಮಸ್ಕ್ ನಡುವಿನ ಸಂಬಂಧ ತೀವ್ರ ಹದಗೆಟ್ಟಿದೆ. ಇದರ ಪರಿಣಾಮವಾಗಿ
ಎಲೋನ್ ಇತ್ತೀಚೆಗೆ ದೊಡ್ಡ ಆಘಾತವನ್ನು ಅನುಭವಿಸಿದ್ದಾರೆ. ಟ್ರಂಪ್ ಕೆಂಗಣ್ಣು ಟೆಸ್ಲಾ ಷೇರುಗಳಿಗೆ ಹೊಡೆತ ನೀಡಿದೆ. ಶೇ.14ರಷ್ಟು ಷೇರು ಕುಸಿದಿವೆ. ಇದರಿಂದಾಗಿ 153 ಶತಕೋಟಿ ಡಾಲರ್ (ಭಾರತೀಯ ಕರೆನ್ಸಿಯಲ್ಲಿ 13 ಲಕ್ಷ ರೂ. ಕೋಟಿ) ಗಿಂತ ಹೆಚ್ಚು ನಷ್ಟ ಉಂಟಾಗಿದೆ. ಕಳೆದ ಐದು ವಹಿವಾಟು ಅವಧಿಗಳಲ್ಲಿ ನಾಲ್ಕರಲ್ಲಿ ಷೇರು ಕುಸಿದಿದೆ.
ಇತ್ತೀಚೆಗೆ, ಮಸ್ಕ್ ಟ್ರಂಪ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಇದು ದೊಡ್ಡ ಬಾಂಬ್‌ಶೆಲ್‌ನಂತಹ ಸ್ಫೋಟಕ ಸಂಗತಿ ಹೇಳುವ ಸಮಯ. ಎಪ್ಸ್ಟೀನ್ ಫೈಲ್‌ಗಳಲ್ಲಿ ಟ್ರಂಪ್ ಹೆಸರಿದೆ. ಅದಕ್ಕಾಗಿಯೇ ಆ ಫೈಲ್‌ಗಳ ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ ಎಂಬ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.
‘ಬಿಗ್ ಬ್ಯೂಟಿಫುಲ್ ಬಿಲ್’ ವ್ಯವಹಾರದಲ್ಲಿ ಮಸ್ಕ್ ಅವರ ವರ್ತನೆಯಿಂದ ನಾನು ತೀವ್ರ ಬೇಸತ್ತಿದ್ದೇನೆ ಎಂದು ಟ್ರಂಪ್ ಮಾಧ್ಯಮಗಳಿಗೆ ಹೇಳಿದ ಕೆಲವೇ ಗಂಟೆಗಳಲ್ಲಿ ಮಸ್ಕ್ ಈ ಟ್ವೀಟ್ ಮಾಡಿದ್ದಾರೆ ಎಂಬುದು ಗಮನಾರ್ಹ. ಎಲೋನ್ ಇತ್ತೀಚೆಗೆ ಡಿಒಜೆ ಇಲಾಖೆಯಿಂದ ಹಿಂದೆ ಸರಿದರು ಎಂಬ ವಿಷಯ ಬಹುತೇಕರಿಗೆ ಗೊತ್ತೇ ಇದೆ. ಡಿಒಜೆ ಇಲಾಖೆಯಿಂದ ಹಿಂದೆ ಸರಿದ ಬೆನ್ನಲ್ಲೇ ಹೇಳಿಕೆ ನೀಡಿದ ಮಸ್ಕ್, “ಟ್ರಂಪ್ ನನ್ನ ಸಹಾಯದಿಂದ 2024ರ ಅಧ್ಯಕ್ಷೀಯ ಚುನಾವಣೆ ಗೆದ್ದರು” ಎಂದು ಹೇಳಿದರು.
ಒಂದೇ ದಿನದಲ್ಲಿ ಟೆಸ್ಲಾ ಸಂಪತ್ತು ಇಷ್ಟೊಂದು ಕುಸಿದಿರುವುದು ಕಂಪನಿಯ ಇತಿಹಾಸದಲ್ಲಿ ಇದೇ ಮೊದಲು. ಕಂಪನಿಯು ದುರ್ಬಲ ಮಾರಾಟ ಸಂಖ್ಯೆಗಳನ್ನು ವರದಿ ಮಾಡಿದ್ದರೂ ಸಹ, ಮೇ ತಿಂಗಳಲ್ಲಿ ಟೆಸ್ಲಾ ಷೇರುಗಳು ಶೇ.22ರಷ್ಟು ಏರಿಕೆಯಾಗಿವೆ. ಆದರೆ, ಮಸ್ಕ್ ಮತ್ತು ಟ್ರಂಪ್ ಸಾರ್ವಜನಿಕವಾಗಿ ಜಟಾಪಟಿಗೆ ಮುಂದಾದ ನಂತರ ಈ ವಾರ ಷೇರುಗಳು ಶೇ.18ರಷ್ಟು ಕುಸಿದಿವೆ. ಈ ವರ್ಷ ಇಲ್ಲಿಯವರೆಗೆ ಟೆಸ್ಲಾ ಷೇರುಗಳು ಶೇ.30ರಷ್ಟು ಕುಸಿತ ಕಂಡಿವೆ ಎಂದು ವರದಿಗಳು ಉಲ್ಲೇಖಿಸಿವೆ. .

