ತುಮಕೂರು : ತುಮಕೂರು ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಇದ್ದು ಸುಮಾರು 30 ರಿಂದ 40% ಮಳೆಯಾಗುವ ಸಾಧ್ಯತೆಯಿದ್ದು, ಎರಡು ದಿನದಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಹೆಚ್ಚಿನ ರೀತಿಯಲ್ಲಿ ಇರುವುದರಿಂದ, ಸಾರ್ವಜನಿಕರಿಗೆ ಅವಶ್ಯಕತೆ ಇದ್ದರೆ ಮಾತ್ರ ಕೆಲಸ ಕಾರ್ಯಗಳಲ್ಲಿ ತೊಡಗಬೇಕು, ಎಂದು ಸೂಚನೆ ನೀಡಿದರು,,
ಜನವರಿ ಒಂದನೇ ತಾರೀಖಿನಿಂದ ಮೇ ಫಸ್ಟ್ ವೀಕ್ ನಲ್ಲೆ ಈಗಾಗಲೇ 100 ಮಿಲಿ ಮೀಟರ್ ಮಳೆಯಾಗಿದ್ದು, ಕಳೆದ ಒಂದು ವಾರದಲ್ಲಿ 30 ಮಿ.ಮೀ, ಕೊರಟೆ ಕೊರಟಗೆರೆ ತಾಲೂಕನ್ನು ಹೊರತುಪಡಿಸಿ ಒಂಬತ್ತು ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ಹಲವು ತಾಲೂಕುಗಳಲ್ಲಿ ಗಿಡ ಮರಗಳು ಬಿದ್ದಿದ್ದು, ವಾಹನಗಳು ಕೂಡ ಜಕಮ್ ಗೊಂಡಿವೆ, ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು,,
ಈಗಾಗಲೇ ಎಲೆಕ್ಟ್ರಿಕ್ ಶಾಕ್ ನಿಂದ ನಾಲ್ಕು ಜನ ಮೃತಪಟ್ಟಿದ್ದು,ಬೈಕ್ ಸವಾರರು ಹೆಚ್ಚಿನ ಗಾಳಿ ಬಂದಾಗ ನಿಧಾನವಾಗಿ ಚಲಿಸಬೇಕು, ರೈತರಿಗೆ ಮತ್ತು ಮಕ್ಕಳಿಗೆ ಈ ನಿಯಮಗಳನ್ನು ಪಾಲಿಸಬೇಕು ಎಂದು ನಾನು ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದರು, ಮತ್ತು ಬೆಸ್ಕಾಂ ಇಲಾಖೆಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ನಾಗರೀಕರಿಗೆ ಯಾವುದೇ ಹಾನಿಯಾಗದಂತೆ ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸಬೇಕು ಎಂದು ಖಡಕ್ ಸೂಚನೆ ನೀಡಿದರು,,,
ವರದಿ : ನರಸಿಂಹರಾಜು ತುಮಕೂರು

