ನವದೆಹಲಿ : ಇತ್ತೀಚೆಗೆ ಆಧಾರ್ ಕಾರ್ಡ್ ನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು, ಆಧಾರ್ ಕಾರ್ಡ್ ನಿಂದ ಕ್ಯೂ ಆರ್ ಕೋಡ್ ತನಕ ಬದಲಾಗಿದೆ. ಇದೀಗ ಯುಐಡಿಎಐ ಶೀಘ್ರದಲ್ಲೇ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಮುಂದಾಗಿದೆ.
ಆಡಳಿತ ವ್ಯವಸ್ಥೆಯನ್ನು, ನಾಗರಿಕ ಸೇವೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ನಿರಂತರ ಪ್ರಯತ್ನ ಮಾಡುತ್ತಿದೆ. ಇದೀಗ ಕ್ಯುಆರ್ ಕೋಡ್ ಆಧಾರಿತವಾದ ಹೊಸ ಆ್ಯಪ್ ಸಿದ್ಧವಾಗಿದ್ದು ಅದರ ಮೂಲಕ ಆಧಾರ್ ದಾಖಲೆಯ ಸಾಫ್ಟ್ಕಾಪಿ ಕೊಡಬಹುದಾಗಿದೆ.
ಯುಐಡಿಎಐ ಸಿದ್ಧಪಡಿಸಲಿರುವ ಅಪ್ಲಿಕೇಶನ್ ಗೆ ಇ-ಆಧಾರ್ ಎಂದು ಕರೆಯಲಾಗುತ್ತದೆ. ಇದರ ಮೂಲಕ ಆಧಾರ್ ಕಾರ್ಡ್‌ನ್ನು ಮನೆಯಿಂದಲೇ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.
ಅಷ್ಟೇ ಅಲ್ಲದೆ, ಜನನ ಪ್ರಮಾಣಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಪ್ಯಾನ್, ಪಿಡಿಎಸ್, ಮನ್ರೇಗಾ ಇತ್ಯಾದಿ ಲಭ್ಯ ಇರುವ ನಿಮ್ಮ ದಾಖಲೆಗಳು ನಿಮ್ಮ ಆಧಾರ್ಗೆ ಲಿಂಕ್ ಮಾಡುವ ಅವಕಾಶ ಇದೆ. ವಿದ್ಯುತ್ ಬಿಲ್ ಡಾಟಾಬೇಸ್ ಅನ್ನೂ ಲಿಂಕ್ ಮಾಡಬಹುದಾಗಿದೆ.

