ಚಿಕ್ಕೋಡಿ: ಮದುವೆಯಾಗಲು (Marriage) ಹೆಣ್ಣು ಸಿಗದ ಕಾರಣ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹುಕ್ಕೇರಿಯಲ್ಲಿ (Hukkeri) ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಶಾಂತಿನಾಥ ಸುರೇಶ್ ಕೇಸ್ತಿ (27) ಎಂದು ಗುರುತಿಸಲಾಗಿದೆ. ನಗರದಲ್ಲಿ ಗ್ಯಾರೇಜ್ ನಡೆಸುತ್ತಿದ್ದ ಯುವಕ ಅತಿಯಾದ ಸಾಲ ಹಾಗೂ ಮದುವೆಗೆ ಹೆಣ್ಣು ಸಿಗದೆ ನೊಂದಿದ್ದ. ಇದರಿಂದಾಗಿ ಯುವಕ ಗ್ಯಾರೇಜ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪೊಲೀಸರಿಗಾಗಿ ನಾನು, ನನ್ನ ಪೋಷಕರು, ಹೆಂಡತಿ ಕಾಯುತ್ತಿದ್ದೇವೆ: ಕೇಜ್ರಿವಾಲ್
ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚಿನ್ನದ ನಾಡಲ್ಲಿ ಅಕ್ರಮವಾಗಿ ನಾಡಬಂದೂಕು ತಯಾರಿಕೆ, ಮಾರಾಟ

