ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಈಗಾಗಲೇ ಬಿಸಿಲಿಗೆ ಜನ ತತ್ತರಿಸಿ ಹೋಗುತ್ತಿದ್ದಾರೆ, ಇದೇ ವೇಳೆ ಬಿಸಿಲಿನ ಧಗೆಗೆ ವಿಷ ಸರ್ಪಗಳು (Snake) ಹುತ್ತ ಬಿಟ್ಟು ಮನೆಗಳಿಗೆ (Houses) ಬಂದು ಸೇರಿಕೊಳ್ಳುತ್ತೀವೆ.

ಈ ಹಿನ್ನೆಲೆ ರಾಜ್ಯದಲ್ಲಿ ಹಾವುಗಳ ಕಡಿತಕ್ಕೆ ಒಳಗಾದವರ ಸಂಖ್ಯೆ ಹೆಚ್ಚಳವಾಗಿದ್ದು, ವರ್ಷದಲ್ಲಿ 18 ಮಂದಿ ಹಾವಿನ ಕಡಿತದಿಂದಾಗಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 2,465 ಮಂದಿ ಹಾವಿನ ಕಡಿತಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ:ಮಂಡ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು
ಕಳೆದ ವಾರದಲ್ಲಿ ಸ್ನೇಕ್ ಬೈಟ್‌ನಿಂದಾಗಿ ಆಸ್ಪತ್ರೆ ದಾಖಲದವರ ಸಂಖ್ಯೆ ಧಿಡೀರ್ ಹೆಚ್ಚಳವಾಗಿದ್ದು, ಕಳೆದ ಒಂದೇ ವಾರದಲ್ಲಿ 227 ಕೇಸ್ ದಾಖಲಾಗಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಸುರಿದ ಮಳೆಗೆ ಬೆನ್ನು ಮೂಳೆ ಮುರಿದುಕೊಂಡ ಟೆಕ್ಕಿ
ಇನ್ನೂ ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಹೆಚ್ಚಿನ ನಿಗಾ ವಹಿಸಿದ್ದು, ಅಗತ್ಯ ಔಷಧಗಳು ಆಸ್ಪತ್ರೆಗಳಲ್ಲಿ ಸಂಗ್ರಹಿಸಿಡುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

