ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಿಂದ ಅನರ್ಹಗೊಂಡ ಬೆನ್ನಲ್ಲೇ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ. 24 ವರ್ಷಗಳ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್
ಟ್ವೀಟ್ ಮೂಲಕ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ.
ಕುಸ್ತಿಗೆ ವಿದಾಯ ಹೇಳಿದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಸೋತಿದ್ದೇನೆ, ಸೆಣಸಾಡಲು ಸಾಧ್ಯವಿಲ್ಲ ಎಂಬ ಭಾವನಾತ್ಮಕ ಪೋಸ್ಟ್ ನಿಮ್ಮೆಲ್ಲರ ಕನಸು ನುಚ್ಚು ನೂರು ಮಾಡಿದ್ದೇನೆಂದು ವಿನೇಶ್ ಟ್ವೀಟ್
ನನ್ನನ್ನು ಕ್ಷಮಿಸಿ ಎಂದು ಕುಸ್ತಿಪಟು ವಿನೇಶ್ ಫೋಗಟ್ ಟ್ವೀಟ್ ಮಾಡಿದ್ದಾರೆ.
ಹರಿಯಾಣ ಮೂಲದ 29 ವರ್ಷದ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಪದಕ ತಂದು ಕೊಡುವ ಭರವಸೆ ಮೂಡಿಸಿದ್ದರು. ಇದಕ್ಕೆ ಕೇವಲ ಒಂದು ಹೆಜ್ಜೆ ಬಾಕಿ ಇತ್ತು. 50 ಕೆಜಿ ಮಹಿಳಾ ಕುಸ್ತಿ ಅಖಾಡದಲ್ಲಿ ಫೈನಲ್ ಪ್ರವೇಶಿಸಿದ ಮೊದಲಿಗರು ಎಂಬ ಹೆಗ್ಗಳಿಕೆಯನ್ನು ಅವರು ಪಡೆದಿದ್ದರು. ಆದರೆ ಬುಧವಾರ ನಡೆದ ಬೆಳವಣಿಗೆ ವಿನೇಶ್ ಫೋಗಟ್ ಮತ್ತು ಕೋಟ್ಯಾಂತರ ಭಾರತೀಯರಿಗೆ ನಿರಾಸೆ ಮೂಡಿಸಿತ್ತು. 50 ಕೆಜಿಗಿಂತ ಹೆಚ್ಚಿನ ತೂಕ ಹೊಂದಿದ ಕಾರಣಕ್ಕೆ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಹೊರ ಬಿದ್ದಿದ್ದರು. ಫೈನಲ್‌ಗೆ ಪ್ರವೇಶ ಪಡೆದಿದ್ದ ಅವರು ಅನರ್ಹಗೊಂಡಿದ್ದರು.