ಬೆಂಗಳೂರು: ಹಾಲಿನ ದರ ಹೆಚ್ಚಳವಾಗಿಲ್ಲ, ಉತ್ಪಾದನೆ ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಹೋದ ವರ್ಷ ಇದೇ ಸಂದರ್ಭದಲ್ಲಿ 90 ಲಕ್ಷ ಲೀಟರ್ ಹಅಲು ಇತ್ತು. ಈಗ 99 ಲಕ್ಷ ಲೀಟರ್ ಇದೆ. ಈಗ ರೈತರಿಂದ ಹಾಲು ತಗೋಬೇಕು ಅಲ್ವಾ. ನಾವು ಬೇಡ ಎಂದು ಹೇಳೋಕೆ ಆಗಲ್ಲ ಎಂದರು.
ಈಗ ಅದಕ್ಕಾಗಿಯೇ ರ್ಧ ಲೀಟರ್ ನಲ್ಲಿ 50 ಮಿಲೀ ಲೀಟರ್ ಹೆಚ್ಚವರಿಯಾಗಿ ನೀಡುತ್ತಿದ್ದೇವೆ. ಕ್ವಾಂಟಿಟಿ ಹೆಚ್ಚಾಗುತ್ತಿದ್ದಂತೆ ಅದಕ್ಕೆ ತಕ್ಕಂತೆ ಬೆಲೆ ಹೆಚ್ಚು ಮಾಡಿದ್ದೇವೆ. ಬಿಜೆಯವರು ಹೇಳ್ತಾರಂತೆ ನೀವು ಕೇಳೊಕೆ ಹೋಗಬೇಡಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ – ಸಿಬಿಐಗೆ ಒಪ್ಪಿಸಿದ ನ್ಯಾಯಾಲಯ
ಬಿಜೆಪಿ ಕಾಲದಲ್ಲಿ 90 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಿತ್ತು. ನಮ್ಮ ಕಾಲದಲ್ಲಿ 99 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಿದೆ. ಬಿಜೆಪಿಯವರು ಹೇಳ್ತಾರೆ ಎಂದು ಬರೆಯೋದಲ್ಲ. ಹಾಲಿನ ದರ ಹೆಚ್ಚಳವಾಗಿಲ್ಲ ಅಷ್ಟೇ ಇದೆ ಎಂದರು.
ಕಾಫಿ ಟೀ ರೇಟು ಜಾಸ್ತಿ ಮಾಡಿದ್ದಾರಾ..? ಎಂಬ ಸುದ್ದಿಗಾರರ ಪ್ರಶ್ನಗೆ ಕಾಫಿ – ಟೀ ರೇಟು ಜಾಸ್ತಿ ಮಾಡಲ್ಲ. NO NO ಹೆಂಗ್ ಜಾಸ್ತಿ ಮಾಡ್ತಾರೆ..?ಹಾಲಿನ ದರ ಹೆಚ್ಚಳ ಮಾಡಿದ್ರೆ ತಾನೇ ಹೆಚ್ಚಿಗೆ ಮಾಡೋದು ಎಂದು ಹೇಳಿದರು. ಇದನ್ನೂ ಓದಿ: ಮಳೆಗೆ ಮನೆಯ ಗೋಡೆ ಕುಸಿತ- 4 ಸಾವು
50 ml ಹೆಚ್ಚುವರಿಗೆ ಯಾಕೆ ಕೊಡ್ತಿದ್ದೀರಾ ಎಂಬ ಪ್ರಶ್ನೆಗೆ..? ಉತ್ತರಿಸಿದ ಅವರು, ಎಲ್ಲಿಗೆ ಚಲಲ್ಲಿ? ಹಾಲನ್ನ ಚಲ್ಲಿಬಿಡೋಕೆ ಆಗುತ್ತಾ? ಹಾಲನ್ನ ರೈತರಿಂದ ಕೊಂಡುಕೊಳ್ಳಲ್ಲ ಎಂದು ಹೇಳೋಕೆ ಆಗುತ್ತಾ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: 2 ನೇ ಬಾರಿಗೆ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ