ನವದೆಹಲಿ : ದೇಶದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಸಹಾಯ ಮಾಡಲು ಚುನಾವಣಾ ಆಯೋಗ ಸಹಾಯ ಮಾಡ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಆರೋಪವನ್ನು ಮತ್ತೆ ಪುನರುಚ್ಚರಿಸಿದ್ದು, ದೇಶಾದ್ಯಂತ ಮತಗಳ್ಳತನವನ್ನು ಸಾಬೀತುಪಡಿಸುತ್ತೇವೆ ಎಂದು ಬುಧವಾರ) ಹೇಳಿದ್ದಾರೆ.
ಎರಡು ದಿನಗಳ ತಮ್ಮ ಸ್ವಕ್ಷೇತ್ರ ರಾಯ್ಬರೇಲಿ ಪ್ರವಾಸದಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, “ಪ್ರಮುಖ ಘೋಷಣೆ ‘ಚೋರ್, ಗಡ್ಡಿ ಛೋಡ್’ ಮತ್ತು ಅದು ದೇಶಾದ್ಯಂತ ಸಾಬೀತಾಗುತ್ತಿದೆ. ನಾವು ಅದನ್ನು ಹೆಚ್ಚು ಹೆಚ್ಚು ನಾಟಕೀಯ ರೀತಿಯಲ್ಲಿ ಮತ್ತೆ ಮತ್ತೆ ಸಾಬೀತುಪಡಿಸುತ್ತೇವೆ” ಎಂದು ಹೇಳಿದ್ದಾರೆ.
ಜೊತೆಗೆ ಹೋಟೆಲ್ವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ರಾಹುಲ್, ಹಿಂದೆ ಜನರು ಚುನಾವಣಾ ಪ್ರಕ್ರಿಯೆಯಲ್ಲಿ ಇಲಿಗಳ ವಾಸನೆಯನ್ನು ಅನುಭವಿಸುತ್ತಿದ್ದರು. ಆದರೆ ಅವರ ಬಳಿ ಪುರಾವೆಗಳಿದ್ದಿಲ್ಲ. ಆದರೆ ಈಗ ನಮ್ಮ ಬಳಿ ಪುರಾವೆಗಳಿವೆ. ಮತ ಕಳ್ಳತನ ನಡೆಯು

