ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ
ಭಾರತ – ಪಾಕಿಸ್ತಾನದ ನಡುವೆ ಯುದ್ದದ ಭೀತಿ
ಸರ್ಕಾರಗಳು ಮಾನವೀಯತೆಗೆ ವಿರುದ್ಧವಾಗಬಾರದು
ಯುದ್ಧದ ಕುರಿತು ಕೋಡಿ ಮಠದ ಶ್ರೀಗಳು ಕೂಡ ಹೇಳಿಕೆ
ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಅಮಾಯಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಭಾರತ ಸರ್ಕಾರಕ್ಕೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ.
ಹಾಗಾಗಿ ಭಾರತ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. ಸೇನಾ ಕಾರ್ಯಾಚರಣೆಯ ಮೂಲಕವೇ ಉತ್ತರಿಸಬೇಕು ಎಂದು ಇಡೀ ದೇಶ ಕೇಳಿಕೊಳ್ಳುತ್ತಿದೆ. ಈ ನಡುವೆ ಭಾರತ-ಪಾಕಿಸ್ತಾನ ಯುದ್ಧದ ಕುರಿತು ಕೋಡಿ ಮಠದ ಶ್ರೀಗಳು ಕೂಡ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಎಂದಿಗೂ, ಯಾವುದೇ ಕಾರಣಕ್ಕೂ ಮಾನವೀಯ ಮೌಲ್ಯಗಳನ್ನು ಬಲಿ ಕೊಡಬಾರದು. ರಾಷ್ಟ್ರಪ್ರೇಮ, ದೇಶಪ್ರೇಮ, ಧನಪ್ರೇಮ ಇವು ಮಾನವೀಯ ಮೌಲ್ಯಗಳ ಪೈಕಿ ಅತೀ ಮುಖ್ಯವಾದವು. ಇಂತಹ ಮೌಲ್ಯಗಳಿಗೆ ಮತಕೊಟ್ಟಿದ್ದರಿಂದ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ.
ಆದರೆ, ಸರ್ಕಾರಗಳು ಮಾನವೀಯತೆಗೆ ವಿರುದ್ಧವಾಗಬಾರದು. ಸರ್ಕಾರದ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಸಮಸ್ತ ಭಾರತೀಯರು ಒಪ್ಪಿಗೆ ಕೊಡಬೇಕು ಎಂದು ತಿಳಿಸಿದ್ದಾರೆ.

