ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ, ಖ್ಯಾತ ಬರಹಗಾರ ಸಲೀಂ ಖಾನ್ ಅವರಿಗೂ ಕೊಲೆ ಬೆದರಿಕೆ ಹಾಕಲಾಗಿದೆ. ಗುರುವಾರ (ಸೆಪ್ಟೆಂಬರ್ 19) ಸಲೀಂ ಖಾನ್ ಬೆಳಗಿನ ವಾಕಿಂಗ್‌ಗೆಂದು ಹೊರಗೆ ಹೋದಾಗ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು “ಲಾರೆನ್ಸ್ ಬಿಷ್ಣೋಯಿ ಕೊ ಬುಲಾವು ಕ್ಯಾ? (ಲಾರೆನ್ಸ್ ಬಿಷ್ಣೋಯ್ ಅನ್ನು ಕರಿಬೇಕಾ?) ಎಂದು ಬೆದರಿಕೆ ಹಾಕಿದ್ದಾರೆ. ಗಮನಾರ್ಹ ವಿಚಾರವೆಂದರೆ ಕೆಲ ತಿಂಗಳ ಹಿಂದಷ್ಟೇ ಗ್ಯಾಂಗ್‌ಸ್ಟರ್‌ನ ಆಜ್ಞೆಯ ಮೇರೆಗೆ ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿರುವ ಮನೆಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು.
ಆದರೆ ಲಾರೆನ್ಸ್ ಬಿಷ್ಣೋಯ್ ಹೆಸರು ಹೇಳಿ ಬೆದರಿಕೆ ಹಾಕಿರುವ ಘಟನೆ ಪ್ರ್ಯಾಂಕ್‌ನಂತೆ ತೋರುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಏಕೆಂದರೆ ದ್ವಿಚಕ್ರ ವಾಹನದಲ್ಲಿ ಬಂದ ಜೋಡಿ ಯಾವುದೇ ಕ್ರಿಮಿನಲ್ ಇತಿಹಾಸವನ್ನು ಹೊಂದಿಲ್ಲ ಮತ್ತು ಕೇವಲ ತಮಾಷೆಗಾಗಿ ಹೀಗೆ ಮಾಡಿರಬಹುದು ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ಮಹಿಳೆಯ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಲೀಂ ಖಾನ್‌ಗೆ ಅಪರಿಚಿತ ಮಹಿಳೆಯಿಂದ ಬೆದರಿಕೆ ಬಂದಿರುವುದು ಇದೇ ಮೊದಲು. ಈ ಮಹಿಳೆ ಯಾರು? ನೀವು ಎಲ್ಲಿಂದ ಬಂದಿದ್ದೀರಿ? ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೆಲ ತಿಂಗಳ ಹಿಂದೆ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು. ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಮನೆ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಇಬ್ಬರು ಯುವಕರು ಗುಂಡಿನ ದಾಳಿ ನಡೆಸಿದ್ದರು.