ಬೆಳಗಾವಿ : ಯತ್ನಾಳ್ ಹೊಸ ಪಕ್ಷ ಕಟ್ಟಲ್ಲ ಬಿಜೆಪಿಯಲ್ಲೇ ಮುಂದುವರೆಯುತ್ತಾರೆ! ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಯತ್ನಾಳ ಬಿಜೆಪಿಗೆ ವಾಪಸ್ ಬರ್ತಾರೆ..ಯತ್ನಾಳ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ,ಮಾಧ್ಯಮದಲ್ಲಿ ಬಂದಿರೋದೆ ಬೇರೆ., ಬಿಜೆಪಿಯಲ್ಲಿ ಯತ್ನಾಳ ಮುಂದುವರೆಯವ ವಿಶ್ವಾಸವಿದೆ, ಎಲ್ಲಿಯೂ ಹೋಗಲ್ಲ , ಆರ್ ಎಸ್ ಎಸ್ ಇದೆಯಲ್ಲ, ಅಷ್ಟೇಸಾಕು. ಮೊನ್ನೆ ಶಾಸಕರ ಕಮಿಟಿ ಮಿಟಿಂಗ್ ನಲ್ಲಿ ಚರ್ಚೆ ಆಗಿದೆ.ಪಕ್ಷಕ್ಕೆ ಮುಜಗುರ ಆಗೋತರಾ ಹೇಳಿಕೆ ಕೊಡಬೇಡಿ ಅಂತಾ ಹೇಳಿದ್ದೇವೆ ಎಂದು ತಿಳಿಸಿದರು.
ವರದಿ. ದಯಾನಂದ. ಎಂ.

