ಜಮೀನಿನ ವಿಚಾರವಾಗಿ ಅಣ್ಣ-ತಮ್ಮಂದಿರ ಗಲಾಟೆ
ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ ಮತ್ತು ಕುಟುಂಬ
ನನ್ನ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ
ತುರುವೇಕೆರೆ ತಾಲೂಕಿನ ಆರ್ ಎಸ್ ಪಾಳ್ಯದಲ್ಲಿ ನಡೆದ ಘಟನೆ
ತುರುವೇಕೆರೆ ತಾಲೂಕಿನ ಆರ್ ಎಸ್ ಪಾಳ್ಯ ಎಂಬ ಗ್ರಾಮದಲ್ಲಿ ಹಳೆ ವೈಶಮ್ಯದ ಹಿನ್ನೆಲೆಯಲ್ಲಿ ಗೌಸ್ ಪೀರ್ ಎಂಬ ಬಡ ಕುಟುಂಬದ ಮೇಲೆ “ಫಯಾಜ್ “ಮತ್ತು ಆತನ ತಂದೆ “ದಸ್ತಗಿರಿ ಸಾಬ್” ಎಂಬುವರು ಏಕಾಏಕಿ ಹಲ್ಲೆ ನಡೆಸಿ ಹಾಗೂ ಗೌಸ್ ಪೀರ್ ಕುಟುಂಬವನ್ನು ಗ್ರಾಮದಿಂದ ಆಚೆ ಕಳುಹಿಸಿರುವ ಘಟನೆ ನಡೆದಿದೆ, ಫಯಾಜ್ ಮತ್ತು ದಸ್ತಗಿರಿ ಸಾಬ್ ಕುಟುಂಬದವರು ಕೊಲೆ ಬೆದರಿಕೆ, ಹಾಕುತ್ತಿರುವ ಕಾರಣ ಮನನೊಂದು ಕುಟುಂಬ ಸಾವಿನ ದಾರಿ ಹಿಡಿದಿವೆ ಎಂದು ತಿಳಿದುಬಂದಿದೆ,
ನನ್ನ ಚಿಕ್ಕಪ್ಪ” ದಸ್ತಗಿರಿ ಸಾಬ್” ಹಾಗೂ ಆತನ ಮಗ “ಫಯಾಸ್ ” ಮತ್ತು ಆತನ ಹೆಂಡತಿ ನನ್ನ ಕುಟುಂಬಕ್ಕೆ ಆರು ವರ್ಷಗಳಿಂದ ತೀವ್ರ ಗಲಾಟೆಯನ್ನು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಯೋಡುತ್ತಿದ್ದರು ಸಹ ಪೊಲೀಸ್ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದ್ದಾರೆ,ನಮಗೆ ಎಲ್ಲೂ ಕೂಡ ನ್ಯಾಯ ಸಿಗುತ್ತಿಲ್ಲ ಆದ್ದರಿಂದ ನಾನು ನನ್ನ ಕುಟುಂಬ ಮನನೊಂದು ಸಾವಿಗೆ ಶರಣಾಗಬೇಕು ನನ್ನ ಸಾವಿಗೆ ತುರುವೇಕೆರೆ ಪೊಲೀಸ್ ಇಲಾಖೆ ಹಾಗೂ ” ದಸ್ತಗಿರಿ ಸಾಬ್ ” ಕುಟುಂಬದವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ,
ನನಗೆ ಜೀವನದಲ್ಲಿ ಬದುಕುವ ಆಸೆಯೇ ಇಲ್ಲದಂತಾಗಿದೆ ಎಲ್ಲಾದರೂ ಹೋಗಿ ನಾನು ಸಾಯಬೇಕು ಎನಿಸುತ್ತಿದೆ ದಯವಿಟ್ಟು ನೊಂದಿರುವ ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆಯನ್ನು ನೀಡಿ ನಾವು ನೆಮ್ಮದಿಯಾಗಿ ಬದುಕಲು ದಾರಿ ಮಾಡಿ ಕೊಡಿ ಇಲ್ಲದಿದ್ದರೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ “ಎಸ್ ಪಿ “ಸಾಹೇಬರು ನ್ಯಾಯ ಕೊಡಿಸಬೇಕು ಇಲ್ಲದಿದ್ದರೆ ನಾನು ನನ್ನ ಕುಟುಂಬ ಸಾಯಲು ಸಿದ್ದರಾಗಿ ಬಂದಿದ್ದೇವೆ,
ಫೋನ್ ಕರೆ ಮಾಡಿ ನನಗೆ ತೀವ್ರ ಕೊಲೆ ಬೆದರಿಕೆ ಹಾಗೂ ನಿನ್ನನ್ನು ಸಾಯಿಸುತ್ತೇನೆ ಎಲ್ಲಿ ಇದ್ದೀಯ ಹೇಳು ಎಂದು ಫಯಾಜ್ ಎಂಬುವ ವ್ಯಕ್ತಿ ಬಲವಂತ ಮಾಡುತ್ತಿದ್ದಾನೆ, ದಯವಿಟ್ಟು ತುರುವೇಕೆರೆ ಪೊಲೀಸರು ಅವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನೊಂದಿರುವ ನನಗೂ ನನ್ನ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ನಮಗೆ ನ್ಯಾಯ ಕೊಡಿಸಿ ಇಲ್ಲದಿದ್ದರೆ ನೀವೇ ಸದಾ ನನ್ನ ಕುಟುಂಬಕ್ಕೆ ಮರಣದಂಡನೆಯನ್ನು ಕೊಡಿ ಎಂದು ತಿಳಿಸಿದ್ದಾರೆ,,
ವರದಿ : ನರಸಿಂಹರಾಜು