ವರ್ಕ್…ವರ್ಕ್ ಅಂತಾ ನಿದ್ದೆಗೆಡೋರು ಎಚ್ಚರಿಕೆಯಿಂದಿರಿ. ನಿದ್ದೆಯ ಕೊರತೆ ಹಾಗೂ ಮಾನಸಿಕ ಒತ್ತಡದಿಂದ ಹೃದಯ ನಿಲ್ಲಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.ಸ್ಟ್ರೇಸ್‌ನಿಂದ ಹೆಚ್ಚಾಗಿ ಕೆಲಸ ಮಾಡಿದರೇ ಹೃದಯ ಆಗುತ್ತೆ ವೀಕ್ ಆಗಲಿದೆಯಂತೆ. ರಾಜ್ಯದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಅದರಲ್ಲೂ ಪ್ರಮುಖವಾಗಿ ಯುವಕ-ಯುವತಿಯರ ಸಂಖ್ಯೆಯೇ ಹೆಚ್ಚು ಎನ್ನುತ್ತಾರೆ ವೈದ್ಯರು.
ಸರಿಯಾಗಿ ನಿದ್ದೆ ಆಗದೇ ಹೋದ್ರೆ ರಕ್ತ ಸಂಚಲನದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು ಹೀಗಾಗಿ ಸರಿಯಾಗಿ ನಿದ್ದೆ ಮಾಡುವಂತೆ ವೈದ್ಯರ ಸಲಹೆ ನೀಡಿದ್ದಾರೆ.
ಹೃದಯದ ಆರೋಗ್ಯ ಎನ್ನುವುದು ಸರಿಯಾಗಿದ್ದರೆ ದೇಹದ ಮಿಕ್ಕೆಲ್ಲ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಉತ್ತಮ ಆಹಾರ ಶೈಲಿ ಹೃದಯದ ಆರೋಗ್ಯ ಕಾಪಾಡುತ್ತದೆ ಎಂದು ಅನೇಕರು ಹೇಳಿದ್ದನ್ನು ಕೇಳಿರುತ್ತೀರಿ. ಆದರೆ ಇದರ ಜೊತೆಯಲ್ಲಿ ಹೃದಯದ ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ನಿದ್ರೆ ಕೂಡ ಎಷ್ಟು ಮುಖ್ಯ ಎನ್ನುವುದನ್ನು ಅರಿಯಬೇಕಿದೆ.
ಉತ್ತಮ ಆರೋಗ್ಯ ನಿಮ್ಮದಾಗಬೇಕು ಎಂದರೆ ಕೇವಲ ನಿಮ್ಮ ಆಹಾರ ಕ್ರಮ ಆರೋಗ್ಯಕರವಾಗಿ ಇದ್ದರೆ ಸಾಲದು ನಿಮ್ಮ ನಿದ್ರೆಯ ಗುಣಮಟ್ಟ ಕೂಡ ಚೆನ್ನಾಗಿ ಇರಬೇಕು. ನಿಮಗೆ ರಾತ್ರಿ ನಿದ್ರೆ ಸರಿಯಾಗಿ ಆಗಿಲ್ಲವೆಂದರೆ ದಿನವಿಡೀ ಆಲಸ್ಯ , ದಣಿವು ಹಾಗೂ ಕಿರಿಕಿರಿ ಭಾವನೆ ಇರುತ್ತದೆ. ಕೇವಲ ಇದು ಮಾತ್ರವಲ್ಲ ಕಡಿಮೆ ನಿದ್ರೆಯು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ ಎಂದು ಸಾಕಷ್ಟು ಅಧ್ಯಯನಗಳು ಮಾಹಿತಿ ನೀಡಿವೆ. ಅಲ್ಲದೇ ಕಳಪೆ ನಿದ್ರೆಯು ಹೃದಯದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಇತ್ತೀಚಿಗೆ ನಡೆದ ಅಧ್ಯಯನವೊಂದು ಮಾಹಿತಿ ನೀಡಿದೆ.