ಮಂಡ್ಯ: ಲೋಕಸಭಾ ಅಖಾಡದಲ್ಲಿ ಗೆಲುವು ಸಾಧಿಸಲು ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಇಂದಿನಿಂದ ಅಖಾಡಕ್ಕೆ ಧುಮುಕುತ್ತಿದ್ದಾರೆ. ಮಂಡ್ಯದಲ್ಲಿ (Mandya) ಇಂದಿನಿಂದ ಪ್ರಚಾರ ಮಾಡುವ ಮೂಲಕ ಮತ ಬೇಟೆಗೆ ಹೆಚ್‌ಡಿಕೆ ಮುಂದಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಸ್ಟಾರ್ ಚಂದ್ರು ಸಚಿವರು ಹಾಗೂ ಶಾಸಕರ ಜೊತೆಗೂಡಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಪ್ತಿಯಲ್ಲಿ ಹಳ್ಳಿಗಳಲ್ಲಿ ರಣ ಬಿಸಿಲಿನ ನಡುವೆಯೂ ಭರ್ಜರಿ ಕ್ಯಾಂಪೇನ್ ಮಾಡಿದ್ದರು. ಆದರೆ ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿಯೇ ಇದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಇಂದಿನಿಂದ ಮಂಡ್ಯ ಅಖಾಡದಲ್ಲಿ ಮತ ಶಿಕಾರಿಗೆ ಧುಮುಕಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ-ಜೆಡಿಎಸ್ ನಾಯಕರೊಂದಿಗೆ ಸಮಾವೇಶ ನಡೆಸಲಿದ್ದಾರೆ. ಇದನ್ನೂ ಓದಿ:ಶಾಸಕ ಜಮೀರ್ ಅಹ್ಮದ್ ಖಾನ್ ಆಸ್ಪತ್ರೆಗೆ ದಾಖಲು; ಕಾರಣವೇನು ?
ಮಳವಳ್ಳಿಯ ಕನಕ ಕ್ರೀಡಾಂಗಣದಲ್ಲಿ ನಡೆಯುವ ಮಯತ್ರಿ ಚುನಾವಣಾ ಸಮಾವೇಶದಲ್ಲಿ ಮತಗಲನ್ನು ಸೆಳೆಯಲು ಮೈತ್ರಿ ಸಜ್ಜಾಗಿದೆ. ಸಮಾವೇಶದಲ್ಲಿ ಇಕ್ಕಲಿಗ ಮತಗಳನ್ನು ಕುಮಾರಸ್ವಾಮಿ ಸೆಳೆದರೆ, ಲಿಂಗಾಯತ ಮತಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕುರುಬ ಸಮುದಾಯದ ಮತಗಳನ್ನು ಹೆಚ್. ವಿಶ್ವನಾಥ್ ಸೆಳೆಯಲಿದ್ದಾರೆ. ಇಲ್ಲದೇ ದಲಿತ ಸಮುದಾಯ ಮತಗಳಿಗಾಗಿ ಮಾಜಿ ಶಾಸಕ ಅನ್ನದಾನಿ ಸೇರಿದಂತೆ ಇತರ ದಲಿತ ಮುಖಂಡರು ಕುಮಾರಸ್ವಾಮಿ ಪರ ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ:ಬೈಕ್ ಟಿಪ್ಪರ್ ನಡುವೆ ಭೀಕರ ಅಪಘಾತ: ಸ್ಥಳದಲೇ ಸವಾರ ಸಾವು

