ಬೆಂಗಳೂರು: ನಮಗೆ ಬಂದ ಕರೆಯ ಆಧಾರದ ಮೇಲೆ ಜಯನಗರದಲ್ಲಿ ಕಾರಿನಲ್ಲಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.
ವಾಹನದಲ್ಲಿ ಹಣವಿರುವ ಬಗ್ಗೆ ನಮ್ಮಗೆ ಕರೆ ಬಂದಿತ್ತು. ಅದರ ಆಧಾರದ ಮೇಲೆ ನಮ್ಮ ಅಧಿಕಾರಿ ನಿಖಿತ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ತಕ್ಷಣ ಅಧಿಕಾರಿಗಳ ಜೊತೆ ನಾನು ಸಹ ಸ್ಥಳಕ್ಕೆ ಬಂದೆ. ಕರೆ ಬಂದ ಮೂರು ನಿಮಿಷಗಳಲ್ಲೇ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಜೈಲಿನ ಅನುಭವದ ಬಗ್ಗೆ ಹೇಳಿಕೊಂಡ ಸೋನು ಶ್ರೀನಿವಾಸ ಗೌಡ
ಕಾರಿನಲ್ಲಿ ಒಟ್ಟು ಐದು ಜನ ಇದ್ದರು. ನಾವು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸ್ಕೂಟರ್ನಿಂದ ಫಾರ್ಚೂನರ್ ಕಾರಿಗೆ ಹಣ ಶಿಫ್ಟ್ ಮಾಡುತ್ತಿದ್ದರು. ಇದೇ ವೇಳೆ ನಿಖಿತ ಅವರು ಒಬ್ಬರೇ ತೆರಳಿ, ಚೀಳದಲ್ಲಿರುವುದು ಎನು ಎಂದು ಪ್ರಶ್ನಸಿದ್ದಾರೆ. ಬಳಿಕ ದ್ವಿಚಕ್ರ ವಾಹನದಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈಗ ಹಣದ ಲೆಕ್ಕ ಮಾಡಲಾಗುತ್ತಿದ್ದು, 1 ಕೋಟಿ ರೂ.ಗೂ ಅಧಿಕ ಹಣ ಇದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 70ft ಆಳದ ಬಾವಿಗೆ ಬಿದ್ದ ಬಾಲಕನ ಚಲನವಲನ ಸಿಸಿಟಿವಿಯಲ್ಲಿ ಸೆರೆ