ಬೆಂಗಳೂರು : ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನಿಖಿಲ್ ಕುಮಾರ್ ಸ್ವಾಮಿ ಯವರನ್ನು ಆಯ್ಕೆ ಮಾಡುವ ಸಂಭಂದ ಇದೆ 12 ತಾರೀಖಿನoದು, ಜೇ ಪೀ ಭವನದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಸಭೆ ಕರೆದಿದ್ದು ಒಮ್ಮತದ ನಿರ್ಧಾರದ ಮೇಲೆ ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂಭವ ಇದೆ.
ಇದೇ ವಿಷಯವಾಗಿ ಮೈಸೂರಿನ ಎಂ ಎಲ್ ಸಿ, ಸಿ .ಎನ್. ಮಂಜೇಗೌಡ್ರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು , ಎಲ್ಲ ಪಕ್ಷದಲ್ಲಿಯೂ ಕುಟುಂಬ ರಾಜಕಾರಣ ವಿದ್ದು ಜೆಡಿಎಸ್ ಪಕ್ಷಕ್ಕೆ ಮಾತ್ರ ಯಾಕೆ ಪ್ರಶ್ನೆ ಮಾಡುತ್ತೀರಾ, ಜೆಡಿಎಸ್ ಪಕ್ಷಕ್ಕೆ ನಿಖಿಲ್ ಕುಮಾರ್ ಸ್ವಾಮಿ ಯಂತಹ ಯುವ ನಾಯಕತ್ವದ ಅವಶ್ಯಕತೆ ಇದೆ ಹಾಗಾಗಿ ಕಾರ್ಯಕ್ರರ್ತ ರೆಲ್ಲ, ಒಮ್ಮತದಿಂದ ಆಯ್ಕೆ ಮಾಡುವ ಸಂಭವವಿದೆ, ಎಂದು ತಿಳಿಸಿದರು…

