ಬೆಂಗಳೂರು: ರಾಜಧಾನಿಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿರುವ ಬಿನ್ನಲೇ ಬೀದಿ ಬದಿ ಹಣ್ಣುಗಳನ್ನು ಕಟ್ ಮಾಡಿ ಮಾರಾಟ ಮಾಡುವುದಕ್ಕೆ ಬಿಬಿಎಂಪಿ ನಿರ್ಬಂಧ ಮಾಡಿದೆ.
ಕಳೆದ ಮುರು ತಿಂಗಳುಗಳಿoದ ನಗರದಲ್ಲಿ ಸುಮಾರು 13 ಕಾಲರಾ ಕೇಸ್‌ಗಳು ಪತ್ತೆಯಾಗಿದ್ದು, ಒಂದೇ ವಾರದಲ್ಲಿ 8 ಕಾಲರಾ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಅಂದು “ಕೈ” ವಿಶ್ವದಿಂದ ಸಹಾಯ ಕೇಳಿತ್ತು, ಈಗ ಭಾರತ ವಿಶ್ವಕ್ಕೆ ಸಹಾಯ ಮಾಡುತ್ತಿದೆ: ಮೋದಿ
ಆದರಿಂದ ಕಾಲರಾ ಬೇಗ ಹರಡುವ ಸಾಧ್ಯತೆ ಇರುವುದರಿಂದ ಬೀದಿ ಬದಿ ಹಣ್ಣಗಳನ್ನು ಕಟ್ ಮಾಡಿ ಮಾರುವುದು, ಬೀದಿಯಲ್ಲಿ ಗಾಡಿಗಳಲ್ಲಿ ಉಟ, ತಿಂಡಿ ಮಾರಾಡ ಮಾಡುವುದನ್ನು ನಿರ್ದಿಷ್ಟ ಅವಧಿವರೆಗೆ ಬಿಬಿಎಂಪಿ ಅಧಿಕಾರಿಗಳು ಬ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಹಬ್ಬದ ದಿನವೇ ಸಿಹಿಸುದ್ದಿ- ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಪ್ರಭುದೇವ್
ಕಾಲರಾ ಹರಡುವಿಕೆಯಲ್ಲಿ ನೀರಿನ ಪಾತ್ರ ಪ್ರಮುಖವಾಗಿದೆ. ಸದ್ಯ ಬೇಸಿಗೆ ಇರುವುದರಿಂದ ನೀರಿನ ಸಮಸ್ಯೆ ತಲೆದೂರಿದ್ದು ಹೆಚ್ಚಿನ ಮಟ್ಟದಲ್ಲಿ ನೀರನ್ನು ಸರಬಾರಾಜು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನರಿಗೆ ಕಲುಷಿತ ಪೂರೈಕೆ ಆಗುತ್ತಿದೆ. ಹೀಗಾಗಿ ಕಾಲರಾ ಜೊತೆಗೆ ವಾಂತಿ, ಭೇದಿ ಕೂಡ ಹೆಚ್ಚು ಮಾಡುತ್ತಿದೆ ಬಿಬಿಎಂಪಿ ಹೇಳಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಫೈನಲ್ ಆದ ಇಂಡಿಯಾ ಒಕ್ಕೊಟದ ಸೀಟು ಹಂಚಿಕೆ