ಬೆಂಗಳೂರು: ಇಂದಿನಿಂದ ಜೂನ್ (June) 20ರ ವರೆಗೆ ರಾಜ್ಯದಲ್ಲಿ ಮಳೆ ಮುಂದುವರೆಯಲ್ಲಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮೂನ್ಸೂಚನೆ ನೀಡಿದೆ.
ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿದ ಬಹುತೇಕ ಜಿಲ್ಲೆಯಲ್ಲಿ ಮಳೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಗಂಟೆಯ 40-50 ಕಿ.ಲೋ ಮೀಟರ್ ವೇಗದಲ್ಲಿ ಬಿರುಗಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಕಲಬುರುಗಿ, ವಿಜಯಪುರ, ಕೊಪ್ಪಳ, ಬೆಂಗಳೂರಿನಲ್ಲಿಯೂ ಜೂನ್ 20ರ ವರೆಗೆ ಸಾಧರಣ ಮಳೆಯಾಗಲಿದೆ. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಮಾಜಿ ಸಿಎಂ ಬೊಮ್ಮಾಯಿ ರಾಜೀನಾಮೆ
ಬೆಂಗಳೂರಿನಲ್ಲಿ ಎಂದಿನಂತೆ ಸಂಜೆ ಬಳಿಕ ಮಳೆಯ ಮುನ್ಸೂಚನೆ ಹವಮಾನಾ ಇಲಾಖೆ ನೀಡಿದೆ. ಜೊತೆಗೆ ಕಳೆದ ಎರಡು ದಿನದಿಂದ ನಗರದಲ್ಲಿ ಗಣನೀಯವಾಗಿ ಉಷ್ಣಾಂಶ ಇಳಿಕೆಯಾಗಿದೆ. ಇದೇ ರೀತಿ ಬೆಂಗಳೂರಿನಲ್ಲಿ ಮೋಡಕವಿದ ವಾತವರಣ ಮುಂದುವರಿಯುತ್ತಿದೆ.. ಇದನ್ನೂ ಓದಿ: ಆಂಧ್ರದ ಉಪ ಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ಗೆ ಸ್ಥಾನ
ಶುಕ್ರವಾರ ಎಲ್ಲಿ ಎಷ್ಟು ಮಳೆ?
* ಕಲಬುರುಗಿ 10MM
* ಬೆಳಗಾವಿ. 0.6MMM
* ಕಾರವಾರ. 0.5MM
* ಹೊನ್ನಾವರ. 13 MM
* ಶಿರಾಲಿ. 3.2MM
* ಯಾದಗಿರಿ. 9MM
* ಕೊಪ್ಪಳ. 5MM
* ಆಗುಂಬೆ. 7MM
* ರಾಮನಗರ. 10MM

