ಭೋಪಾಲ್: ಕುಡಿದ ಮತ್ತಿನಲ್ಲಿ ಬಿಜೆಪಿ ಕಾರ್ಯಕರ್ತರಿದ್ದ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ರಘುವಂಶಿ ಹಾಗೂ ಕಮಲೇಶ್ ಯಾದವ್ ಸಾವನ್ನಪ್ಪಿದ ಕಾರ್ಯಕರ್ತರು. ಇತ್ತ ಅಪಘಾತ ನಡೆಸಿದ ಕಾರ್ ಚಾಲಕನನ್ನು ಸೌರಭ್ ಯಾದವ್ ಎಂದು ಗುರುತಿಸಲಾಗಿದೆ. ಆತ ಟ್ರೈನಿ ಪೈಲಟ್ ಆಗಿದ್ದು, ಸಹ ಪೈಲಟ್ ಜೊತೆಗೆ ಕುಡಿದ ಮತ್ತಿನಲ್ಲಿ ಕಾರನ್ನು ವೇಗವಾಗಿ ಚಲಾಯಿಸುತ್ತಾ ಬಂದಿದ್ದಾನೆ. ಈ ವೇಳೆ ಕುಡಿದ ಅಮಲಿನಲ್ಲಿ ಅಪಘಾತ ನಡೆದಿದೆ. ಇದನ್ನೂ ಓದಿ: ದೇಶಕ್ಕಾಗಿ ಹೋರಾಡಿದ ತಂದೆ.. ದೇಶಕ್ಕೆ ದ್ರೋಹ ಮಾಡಿದ ಮಗ – ರಾಮೇಶ್ವರಂ ಕೆಫೆ ಪ್ರಕರಣ
ರಸ್ತೆಯಲ್ಲಿ ಬರುತ್ತಿದ್ದ ಬಿಜೆಪಿ ಕಾರ್ಯದರ್ಶಿ ಆನಂದ್ ರಘುವಂಶಿ ಹಾಗೂ ಕಮಲೇಶ್ ಯಾದವ್ ಸ್ಕೂಟರ್‌ಗೆ ನಶೆಯಲ್ಲಿ ಬರುತ್ತಿದ್ದ ಸೌರಭ್ ಯಾದವ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ಬ್ಲಾಸ್ಟ್ ಪ್ರಕರಣ; ಶಂಕಿತ ಉಗ್ರರರು ಇಂದು ಬೆಂಗಳೂರಿಗೆ

