ಕಾಫಿ (Cofee) ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಕಾಫಿ ಇಲ್ಲದೇ ಕೆಲವರಿಗೆ ಇರಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ಅವರದ್ದಾಗಿರುತ್ತದೆ. ನಮ್ಮೆಲ್ಲರ ದಿನವು ಈ ನೆಚ್ಚಿನ ಒಂದು ಕಾಫಿಯಿಂದ ಸ್ಟಾರ್ಟ್ ಆಗುತ್ತದೆ. ಇನ್ನು ಕೆಲವರಿಗೆ ಅದರಿಂದಲೇ ದಿನ ಕೊನೆಯಾಗುತ್ತದೆ. ಕಾಫಿಯ ಸೇವನೆಯಿಂದ ನಮ್ಮ ದೇಹದಲ್ಲಿ (Body) ಶಕ್ತಿ ಹೆಚ್ಚಾಗಿ, ಇದು ತೂಕ ಇಳಿಕೆಯಲ್ಲೂ ಸಹಾಯ ಮಾಡುತ್ತದೆ. ಕಾಫಿಯಲ್ಲಿ ಕೆಫೀನ್ ಅಂಶ ಹೆಚ್ಚಿರುವುದರಿಂದ, ಹೆಚ್ಚಿನ ಜನರು ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕೇ ಅಥವಾ ಬೇಡವೇ ಅಂತ ಯೋಚ್ನೆ ಮಾಡುತ್ತಾರೆ. ಇದಕ್ಕೆ ಉತ್ತರವನ್ನು ಸುದ್ದಿ ಮಾಧ್ಯಮ (News Media) ಜಾಗರಣ್ ಜೊತೆಗಿನ ಸಂವಾದದಲ್ಲಿ ಶಾಲಿಮಾರ್ ಬಾಗ್‌ನ ಫೋರ್ಟಿಸ್ ಆಸ್ಪತ್ರೆಯ ಹೆಡ್ ಡಯೆಟಿಷಿಯನ್, ಡಿ. ಟಿ. ಶ್ವೇತಾ ಗುಪ್ತಾ ಅವರು “ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಉತ್ತಮವೇ ಅಥವಾ ಅನಾರೋಗ್ಯಕ್ಕೆ ದಾರಿಯೇ” ಎಂಬುದನ್ನು ವಿವರಿಸಿದ್ದಾರೆ.
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಉತ್ತಮವೇ?
ಡಯೆಟಿಷಿಯನ್ ಗುಪ್ತಾ ಅವರ ಪ್ರಕಾರ “ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಆರೋಗ್ಯದ ಮೇಲೆ ಮಿಶ್ರ ಪರಿಣಾಮಗಳನ್ನು ಉಂಟು ಮಾಡುತ್ತದೆ. ಒಂದುಕಡೆ ಇದು ಹೊಟ್ಟೆಯ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸಬಹುದು. ಅದಲ್ಲದೇ, ಸೂಕ್ಷ್ಮ ಆರೋಗ್ಯ ಅಥವಾ ಆಸಿಡ್ ರಿಫ್ಲಕ್ಸ್ ಹೊಂದಿರುವ ವ್ಯಕ್ತಿಗಳಿಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತರಬಹುದು.
ಇನ್ನೊದು ಕಡೆ ಕೆಲವು ಅಧ್ಯಯನಗಳ ಪ್ರಕಾರ ಮಧ್ಯಮ ಕಾಫಿ ಸೇವನೆಯಿಂದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಆದರೆ ಇದು ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಮಾಡುವುದರಿಂದ ಆಗುವುದಿಲ್ಲ ಎಂದು ಹೇಳುತ್ತವೆ.
ಅದಲ್ಲದೇ, ಬೆಳಗಿನ ಉಪಾಹಾರಕ್ಕೆ ಅಥವಾ ಯಾವುದೇ ಊಟದ ನಂತರ ನಿಯಮಿತವಾಗಿ ಕಾಫಿ ಸೇವನೆ ಮಾಡುವುದರಿಂದ, ದೇಹದಲ್ಲಿ ಪೋಷಕಾಂಶಗಳ ಕೊರತೆಗೆ ನೇರ ಕಾರಣವಾಗಬಹುದು. ಏಕೆಂದರೆ ಕೆಫಿನ್ ಅಂಶವು ಅನೇಕ ಪೋಷಕಾಂಶಗಳನ್ನು ಅದರಲ್ಲೂ ವಿಶೇಷವಾಗಿ ಆಹಾರದಲ್ಲಿರುವ ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ.
ಇದರಿಂದ ರಕ್ತಹೀನತೆ ಎಂಬ ಆರೋಗ್ಯ ಸಮಸ್ಯೆ ಬರಬಹುದು. ಆದ್ದರಿಂದ ಬೇರೆ ಬೇರೆ ಆಹಾರ ಕ್ರಮ ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.
ಇದಲ್ಲದೇ ನಿರಂತರವಾಗಿ ಖಾಲಿ ಹೊಟ್ಟೆಯಲ್ಲಿ ಕಾಫಿಯನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣಕ್ಕೆ ನೇರ ಕಾರಣವಾಗುತ್ತದೆ.
ಒಟ್ಟಾರೆಯಾಗಿ, ಖಾಲಿ ಹೊಟ್ಟೆಯಲ್ಲಿ ಯಾವಗಲೋ ಒಮ್ಮೆ ಕಾಫಿ ಸೇವಿಸದರೆ ಏನಾಗುವುದಿಲ್ಲ. ಆದರೆ ನಿಯಮಿತವಾಗಿ ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಮಾಡುವುದರಿಂದ ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ.
ಇದನ್ನೂ ಓದಿ:
ಆಲ್ಝೈಮರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತವೆ ಈ ಆಹಾರಗಳು
ಕಾಫಿಯ ಸೇವನೆಯಿಂದ ಆಗುವ ಪ್ರಯೋಜನಗಳು
- ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
- ಇದರ ಸೇವನೆಯಿಂದ ಆಯಾಸ ಕಡಿಮೆಯಾಗುತ್ತದೆ.
- ಟೈಪ್ 2 ಡಯಾಬಿಟೀಸ್ ಇರುವ ವ್ಯಕ್ತಿಗಳಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.
- ಇದು ಮೇದೋಜ್ಜೀರಕ ಗ್ರಂಥಿಯಲ್ಲಿನ ಬೀಟಾ ಕೋಶಗಳ ಕಾರ್ಯ ನಿರ್ವಹಣೆಯನ್ನು ರಕ್ಷಿಸುವ ಕಾರ್ಯವನ್ನು ಮಾಡುತ್ತದೆ.
- ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ.
- ದಿನಕ್ಕೆ ಒಂದು ಅಥವಾ ಎರಡು ಬಾರಿ ಕಾಫಿ ಕುಡಿಯುವುದರಿಂದ ಹೃದಯಕ್ಕೂ ಉತ್ತಮ.
ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಕಪ್ ಕಾಫಿಯನ್ನು ಕುಡಿಯಬಹುದು?
ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ದಿನವೊಂದಕ್ಕೆ 400 ಮಿಲಿಗ್ರಾಂಳಷ್ಟು ಕೆಫೀನ್ ಅಂಶವನ್ನು ಸೇವಿಸಬಹುದು. ಅಂದರೆ ದಿನವೊಂದಕ್ಕೆ 4 ರಿಂದ 5 ಕಪ್‌ಗಳಷ್ಟು ಕಾಫಿಯನ್ನು ಸೇವಿಸಬಹುದು. ಅದಕ್ಕಿಂತ ಜಾಸ್ತಿ ಕಾಫಿ ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಬಹುದು.
ಮಹಾಬಲೇಶ್ವರನ ಸನ್ನಿಧಾನದಲ್ಲಿ ದೀಪೋತ್ಸವ ಸಂಭ್ರಮ
ಒಟ್ಟಾರೆಯಾಗಿ, ಯಾವುದೇ ಆಗಿರಲಿ ಅದು ಕಾಫಿ ಆಗಿರಲಿ ಟೀ ಆಗಿರಲಿ ಎಲ್ಲವೂ ಮಿತವಾಗಿದ್ದರೆ ಚೆಂದ. ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ತರುತ್ತದೆ. ಅದಕ್ಕೆ ಹಿರಿಯರು ಹೇಳುವುದು ಅತಿಯಾದರೆ ಅಮೃತವೂ ವಿಷ ಅಂತ. ಸೋ ನೀವು ಕಾಫಿ ಜಾಸ್ತಿ ಕುಡಿತಾ ಇದ್ದರೆ, ಇದನ್ನು ಮತ್ತೊಮ್ಮೆ ಓದಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ