ಸಿಹಿ ಅಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯ ಸಿಹಿ ತಿಂಡಿಯನ್ನ ಇಷ್ಟ ಪಡುತ್ತಾರೆ. ಕೆಲವರಿಗೆ ಕೇಕ್ ಇಷ್ಟ ಆಗಬಹುದು, ಇನ್ನು ಕೆಲವರಿಗೆ ಜಿಲೇಬಿ, ಚಾಕೋಲೆಟ್ ಹೀಗೆ ಬೇರೆ ಬೇರೆ ತಿಂಡಿಗಳು ಇಷ್ಟ ಆಗಬಹುದು. ಆದ್ರೆ ಸಾಕಷ್ಟು ಜನ ಡ್ರೈ ಜಾಮೂನ್ ಇಷ್ಟ ಪಡುತ್ತಾರೆ. ಅದನ್ನ ಬೇಕರಿಯಲ್ಲಿ ಮಾಡಿರೋದನ್ನ ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿ ತಿನ್ನೋದು ಉತ್ತಮ ಅಲ್ವಾ.. ಹೌದು ಮನೆಯಲ್ಲಿ ಸುಲಭವಾಗಿ ಸಿಹಿ ಮಾಡಬೇಕು ಅಂದುಕೊಂಡಿದ್ದರೆ ಇಲ್ಲದೆ ಯಾರಾದರು ಅತಿಥಿಗಳು ಬಂದರೆ ಅವರಿಗೆ ಸುಲಭವಾಗಿ ಡ್ರೈ ಜಾಮೂನ್ ಮಾಡಿಕೊಡಿ.
ಬಹಳ ಸುಲಭವಾಗಿ ಡ್ರೈ ಜಾಮೂನ್ ಮಾಡಬಹುದು ಜೊತೆಗೆ ತುಂಬ ಕಡಿಮೆ ಸಮುಯದಲ್ಲಿ ಮಾಡಬಹುದು. ಅದರಲ್ಲೂ ನಾವು ಯಾರಾದರು ಮದುವೆಗೆ ಭೇಟಿ ನೀಡಿದಾಗ ಅಲ್ಲಿ ಡ್ರೈ ಜಾಮೂನ್ ಸವಿದಿರುತ್ತೇವೆ ತುಂಬಾನೆ ರುಚಿಕರ ಹಾಗೂ ಮತ್ತೆ ಮತ್ತೆ ಸವಿಯಬೇಕೆನಿಸುತ್ತದೆ. ಆದ್ರೆ ಮನೆಯಲ್ಲಿ ನಾವು ಡ್ರೈ ಜಾಮೂನ್ ಮಾಡುವುದು ಕಡಿಮೆ. ಸಕ್ಕರೆ ಪಾಕ ಹಾಕಿಯೆ ಜಾಮೂನ್ ಮಾಡುವುದು ಹೆಚ್ಚು. ಆದರೆ ಪಾಕದ ಜಾಮೂನ್ಗಿಂತಲೂ ಈ ಡ್ರೈ ಜಾಮೂನ್ ರುಚಿ ಹೆಚ್ಚು.

ಡ್ರೈ ಜಾಮೂನ್ ಮಾಡಲು ಹೆಚ್ಚು ವಸ್ತುಗಳು ಬೇಕು ಎಂದು ಹಲವರು ಅಂದುಕೊಂಡಿರುತ್ತಾರೆ. ಆದರೆ ಕಡಿಮೆ ವಸ್ತು ಬಳಸಿ ಸುಲಭವಾಗಿ ಇದನ್ನು ಮಾಡಬಹುದು. ಹಾಗಾದ್ರೆ ಮನೆಯಲ್ಲೇ ಡ್ರೈ ಜಾಮೂನ್ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು
* ಜಾಮೂನ್ ಪೌಡರ್- 200 ಗ್ರಾಮ್
* ಸಕ್ಕರೆ
* ಎಣ್ಣೆ
* ಏಲಕ್ಕಿ ಪುಡಿ
* ನಿಂಬೆ ಹುಳಿ
* ಕೊಬ್ಬರಿ ಪುಡಿ

ಮಾಡುವ ವಿಧಾನ
* ಮೊದಲಿಗೆ ಗುಲಾಬ್ ಜಾಮೂನ್ ಮಿಕ್ಸ್ ಪೌಡರ್ ಅನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪವೆ ಹಾಲು ಹಾಕಿಕೊಂಡು ಕಲಸಿಕೊಳ್ಳಬೇಕಾಗುತ್ತದೆ. ಹಿಟ್ಟು ಮೃದುವಾಗಿ ಬರುವಂತೆ ಕಲಸಿಕೊಳ್ಳಿ. ಬಳಿಕ ಇದಕ್ಕೆ ಪ್ಲೇಟ್ ಮುಚ್ಚಿ 15 ನಿಮಿಷ ಬದಿಗಿಡಿ.
*ಈಗ ಸಕ್ಕರೆ ಪಾಕ ಮಾಡಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸಕ್ಕರೆ ಹಾಗೂ ನೀರು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಿ. ಸಕ್ಕರೆ ಕರಗುವ ವರೆಗೂ ಬಿಡಿ. ಬಳಿಕ ಸ್ವಲ್ಪ ನಿಂಬೆ ರಸ ಹಿಂಡುಕೊಳ್ಳಿ. 2 ನಿಮಿಷ ಕುದಿ ಬಂದರೆ ಸಾಕಾಗುತ್ತದೆ. ಇಷ್ಟು ಮಾಡಿದ ಬಳಿಕ ಜಾಮೂನ್ ಹಿಟ್ಟು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳ ಮಾಡಿ ಇಡಿ.

* ಈಗ ಜಾಮೂನ್ ಅನ್ನು ತೆಗದು ಸಕ್ಕರೆ ಪಾಕಕ್ಕೆ ಹಾಕಿಕೊಳ್ಳಿ. ಎಲ್ಲಾ ಜಾಮೂನ್ ಅನ್ನು 5 ನಿಮಿಷಗಳ ಬಳಿಕ ಪಾಕದಿಂದ ತೆಗೆದು ಒಂದು ತಟ್ಟೆಗೆ ಹಾಕಿಕೊಳ್ಳಿ. ಬಳಿಕ ಅಂತಿಮವಾಗಿ ಇದಕ್ಕೆ ಕೊಬ್ಬರಿ ಪುಡಿಯನ್ನು ಮೇಲೆ ಹಾಕಿಕೊಂಡರೆ ನಿಮ್ಮ ಮುಂದೆ ಡ್ರೈ ಜಾಮೂನ್ ರೆಡಿಯಾಗುತ್ತದೆ. ಇದು ಜಾಮೂನ್ ಮಾಡುವ ಸುಲಭದ ವಿಧಾನವಾಗಿದೆ.