ದೆಹಲಿ: ಹೊಸ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿಆರ್ಎಸ್ ನಾಯಕಿ, ತೆಲಂಗಾಣ ಪರಿ಼ಷತ್ ಸದಸ್ಯೆ ಕೆ.ಕವಿತಾ ಬಂಧನಕ್ಕೊಳ್ಪಟ್ಟಿದು, ಜಾಮೀನು ನೀಡಲು ದೆಹಲಿ ರೋಸ್ ಅವೆನ್ಯ ಕೋರ್ಟ್ ನಿರಾಕರಿಸಿದೆ. ಏಪ್ರಿಲ್ 4 ರಂದು ಆದೇಶ ಕಾಯ್ದಿರಿಸಿದ ನ್ಯಾ.ಕಾವೇರಿ ಬವೇಜಾ ಅವರಿಂದು ತೀರ್ಪು ಪ್ರಕಟಿಸಿದ್ದಾರೆ.
ಕೆ.ಕವಿತಾ ಅವರ ಮೇಲಿನ ಆರೋಪಗಳೇನು?
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ AAP ನಾಯಕ ವಿಜಯ್ ನಾಯರ್ ಅವರು ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳ ನಿಯಂತ್ರಣದಲ್ಲಿರುವ ‘ದಕ್ಷಿಣ ಗುಂಪಿನಿಂದ’ 100 ಕೋಟಿ ರೂಪಾಯಿಗಳನ್ನು ಕಿಕ್ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಕವಿತಾ ಅವರು 100 ಕೋಟಿ ರೂಪಾಯಿ ಕಿಕ್ಬ್ಯಾಕ್ ಪಾವತಿಸಿದ ಮದ್ಯದ ಕರ್ಟೆಲ್ ‘ದಿ ಸೌತ್ ಗ್ರೂಪ್’ ನ ಭಾಗವಾಗಿದ್ದರು ಎಂದು ಇಡಿ ಆರೋಪಿಸಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ನುಗ್ಗಿಯಾದರು ಭಯೋತ್ಪಾದಕರನ್ನು ಕೊಲ್ಲುತೇವೆ: ರಾಜನಾಥ್ ಸಿಂಗ್
ಕಳೆದ ಮರ್ಚ್ 15 ರಂದು ಹೈದರಾಬಾದ್ನಲ್ಲಿ ಶೋಧ ನಡೆಸಿದ ಬಳಿಕ ಜಾರಿ ನಿರ್ದೇಶನಾಲಯ ಕೆ.ಕವಿತಾ ಅವರನ್ನ ಬಂಧಿಸಿತ್ತು. ವಿಚಾರಣೆ ಬಳಿಕ ಅವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸದ್ಯ ಕವಿತಾ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಇದೇ ಪ್ರಕರಣದಲ್ಲಿ ಬಂಧನಕ್ಕೊಳ್ಳಪಟ್ಟಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಜಿ ಡಿಸಿಎಂ ಮನೀಶ್ ಸಿಸೋಡಿಯ ಇದೇ ಜೈಲಿನಲ್ಲಿದ್ದಾರೆ. ಇದನ್ನೂ ಓದಿ: 5 ಲಕ್ಷಕ್ಕೆ ನವಜಾತ ಶಿಶುಗಳ ಮಾರಾಟ- ಸಿಬಿಐ ದಾಳಿಯಲ್ಲಿ 2 ನವಜಾತ ಶಿಶು, 8 ಮಕ್ಕಳ ರಕ್ಷಣೆ
ದೆಹಲಿಯಲ್ಲಿ ಜಾರಿ ಮಾಡಲು ಹೊರಟಿದ್ದ ಹೊಸ ಮಧ್ಯ ನೀತಿಯಲ್ಲಿ ಕೆಲವು ಮದ್ಯ ಲಾಬಿ ಗುಂಪುಗಳಿಗೆ ಲಾಭದಾಯಕವಾಗುವ ರೀತಿಯಲ್ಲಿ ಯೋಜನೆ ರೂಪಿಸುವ ಪಿತೂರಿಯ ಭಾಗವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮದ್ಯದ ವ್ಯಾಪಾರಿಗಳ ʻದಿ ಸೌತ್ ಗ್ರೂಪ್ʼ ಲಾಬಿಗೆ ಕವಿತಾ ಸಂರ್ಕ ಹೊಂದಿದ್ದಾರೆ ಎಂದು ಇಡಿ ವಿಚಾರಣೆ ವೇಳೆ ಹೇಳಿದೆ. ಇದನ್ನೂ ಓದಿ: ರಾಜ ಮನೆತನದವರು ದಂತದ ಗೋಪುರದಲ್ಲಿ ಇದ್ದತಂವರು,ಅವರಿಗೆ ಜನರ ಮಧ್ಯೆ ಇದ್ದು ಗೊತ್ತಿಲ್ಲ: ಯತೀಂದ್ರ
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ವಿಜಯ್ ನಾಯರ್ ಶರತ್ ರೆಡ್ಡಿ, ಕೆ ಕವಿತಾ ಮತ್ತು ಮಾಗುಂಟ ಶ್ರೀನಿವಾಸುಲು ಅವರ ನಿಯಂತ್ರಣದಲ್ಲಿರುವ ʻದಿ ಸೌತ್ ಗ್ರೂಪ್ʼನಿಂದ ಎಎಪಿ ನಾಯಕರ ಪರವಾಗಿ ಕನಿಷ್ಠ 100 ಕೋಟಿ ರೂ.ಗಳಷ್ಟು ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕೆ. ಕವಿತಾ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ತೆಲಂಗಾಣದಲ್ಲಿ ನೆಲೆ ಸಾಧಿಸಲು ಕೇಂದ್ರ ಸರ್ಕಾರ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಯ ಸಾವು-ವರ್ಷದಲ್ಲಿ ಇದಾಗಿದೆ 10 ನೆ ಪ್ರಕರಣ