ನವದೆಹಲಿ: ಮಕ್ಕಳ ಕಳ್ಳಸಾಗಣೆ ಪ್ರಕರಣ ಸಂಬಂಧ ಸಿಬಿಐ ದೆಹಲಿಯ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿ 2 ನವಜಾತ ಶಿಶು ಹಾಗೂ 8 ಮಕ್ಕಳ ರಕ್ಷಣೆ ಮಾಡಲಾಗಿದೆ.
ಬಂಧಿತರಲ್ಲಿ ಆಸ್ಪತ್ರೆಯ ವಾರ್ಡ್ ಬಾಯ್ ಸೇರಿದಂತೆ ಕೆಲವು ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ. ಶುಕ್ರವಾರ ಸಂಜೆ ದೆಹಲಿಯ ಎಸ್‌ಸಿಆರ್‌ನ ಹಲವೆಡೆ ಸಿಬಿಐ ದಾಳಿ ನಡೆಸಿತ್ತು. ಇದೇ ವೇಳೆ ಕೇಶವಪುರಂ ಮನೆಯೊಂದರಿಂದ 2 ನವಜಾತ ಶಿಶುಗಳನ್ನು ಮತ್ತು 8 ಮಕ್ಕಳನ್ನು ರಕ್ಷಸಿದೆ. ಇದನ್ನೂ ಓದಿ: ಮೇಘಾಲಯ ಸಿಎಂ ಬೆಂಗಾವಲು ವಾಹನ ಹಿಂದೆ ಚಲಿಸುತ್ತಿದ್ದ ಕಾರಿನಲ್ಲಿ ಝಣಝಣ ಕಾಂಚಾಣ – 1.25 ಕೋಟಿ ರೂ ಸೀಜ್
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೇ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಖರೀದಿಸಿ ವ್ಯಕ್ತಿಯ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: “ದಿ ಕೇರಳ ಸ್ಟೋರಿ” ಸಿನಿಮಾ ಪ್ರಸಾರಕ್ಕೆ ಕೇರಳ ಸಿಎಂ ವಿರೋಧ

