ನವದೆಹಲಿ: ವಿವಧ ಹಗರಣಗಳ ದಾಖಲೆಗಲನ್ನು ಕಳವು ಮಾಡಿಸಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಮತ್ತು ಸಹಾಯಕ ಅಧಿಕಾರಿ ವೈವಿವಿಜೆ ರಾಜಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಉತ್ತರಖಂಡದ ಅಲ್ಮೋರಾ ಪಟ್ಟಣದ ನ್ಯಾಯಲಯದ ಆದೇಶದ ಮೇರೆಗೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ಮಾರ್ಚ್ 2 ರಂದು ನ್ಯಾಯಲಯವು ಅಧಿಕಾರಿಗಲ ವಿರುದ್ಧ ಪ್ಲೆಸೆಂಟ್ ವ್ಯಾಲಿ ಫೌಂಡೇಶನ್ ಎನ್‌ಜಿಒ ಸಂಸ್ಥೆ ನೀಡಿದ್ದ ದೂರನ್ನು ಸ್ವೀಕರಿಸಿತ್ತು. ಕೋರ್ಟ್ ಸರ್ಕಾರದ ಕಾರ್ಯದರ್ಶಿಗಳ ವಿರುದ್ದ ಕೇಶ್ ದಖಲಿಸಿ ತನಿಖೆ ನಡೆಸುವಂತೆ ಕಂದಾಯ ಪೊಲೀಸರಿಗೆ ಸೂಚಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 392 (ದರೋಡೆ), 447 (ಕ್ರಿಮಿನಲ್ ಅತಿಕ್ರಮಣ), 120-ಬಿ (ಕ್ರಿಮಿನಲ್ ಪಿತೂರಿ), 504 (ಉದ್ದೇಶರರ್ಪೂವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಎಸ್‌ಸಿ- ಎಸ್ಟಿ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಮೋದಿ ಫೋಟೋ ಬಳಕೆ ವಿಚಾರ- ಬಿಜೆಪಿಯಿಂದ ಈಶ್ವರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಎನ್‌ಜಿಒ ನೀಡಿದ ದೂರಿನಲ್ಲಿ ಏನಿದೆ?
ಕಳೆದ ಫೆಬ್ರವರಿ 14 ರಂದು ದಡಕಡ ಗ್ರಾಮದಲ್ಲಿ ಎನ್‌ಜಿಒ ನಡೆಸುತ್ತಿರುವ ಶಾಲೆಗೆ ಅಧಿಕಾರಿಗಳು ನಾಲ್ವರನ್ನು ಕಳುಹಿಸಿದ್ದರು. ಕರ‍್ಯರ‍್ಶಿಕಡೆಯವರು ಎಂದು ಹೇಳಿಕೊಂಡ ನಾಲ್ವರು ಎನ್‌ಜಿಒ ಜಂಟಿ ಕರ‍್ಯರ‍್ಶಿ ಕಚೇರಿ ಕೊಠಡಿಯನ್ನು ಧ್ವಂಸಗೊಳಿಸಿದರು. ಜೊತೆಗೆ ಅವರು ಪಾಲುದಾರರಾಗಿದ್ದ ಹಗರಣಗಳ ಸಾಕ್ಷ್ಯಾಧಾರಗಳಿರುವ ಕಡತಗಳು, ದಾಖಲೆಗಳು ಮತ್ತು ಪೆನ್ ಡ್ರೈವ್‌ಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಎನ್‌ಜಿಒ ಅಧಿಕಾರಿಗಳು ತಮ್ಮ ವಿರುದ್ಧ ವಿಜಿಲೆನ್ಸ್ ಇಲಾಖೆ ಮತ್ತು ಇತರ ವೇದಿಕೆಗಳಲ್ಲಿ ಸಲ್ಲಿಸಿರುವ ಭ್ರಷ್ಟಾಚಾರದ ದೂರುಗಳನ್ನು ತಕ್ಷಣವೇ ಹಿಂಪಡೆಯದೇ ಇದ್ದರೆ ಅವರನ್ನ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆಂದೂ ದೂರುದಾರರು ತಿಳಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭೀಕರ ಅಪಘಾತ – ಘಟನೆಯಲ್ಲಿ ಮೂವರು ಪೊಲೀಸರು ಸಾವು

