ಬೆಂಗಳೂರು : ನಟ, ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಹುನಿರೀಕ್ಷಿತ ‘ಯುಐ’ ಸಿನಿಮಾಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ.‘ಯುಐ’ ಸಿನಿಮಾ ಇದೇ ಡಿಸೆಂಬರ್ 20 ರಂದು ಎಂಟು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ್ದಾರೆ.
ಪೋಸ್ಟರ್ ಜೊತೆ ಉಪೇಂದ್ರ ಅವರು ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್ / ಫ್ಲಾಪ್ ಅಂತ ಹೇ ಳ್ತಿದ್ರೀ , ಈ ಸಿನಿಮಾನಿಮ್ಮನ್ ನೋ ಡಿ…? ಎಂದು ಮತ್ತೆ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
‘ನಾನು’ ಮತ್ತು ‘ನೀ ನು’ ಎಂ ಬ ಅರ್ಥ ನೀ ಡುವ ಶೀರ್ಷಿಕೆ ಹೊಂದಿರುವ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿ. ಅಜನೀಶ್ ಲೋಕನಾಥ್ ಸಂಗೀತವಿದೆ. ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇ ಶನಕ್ಕೆ ಮರಳಿರುವ ಚಿತ್ರವಿದು. ಕೆ.ಪಿ. ಶ್ರೀ ಕಾಂ ತ್ ಮತ್ತು ಜಿ. ಮನೋ ಹರನ್ ಬಂಡವಾಳ ಹೂಡಿದ್ದಾರೆ. ನಟರಾದ ಉಪೇಂದ್ರ, ರವಿಶಂಕರ್, ಅಚ್ಯುತ್ಕುಮಾರ್, ಸಾಧು ಕೋಕಿಲ ಈ ಸಿನಿಮಾದಲ್ಲಿ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

