ಹಬ್ಬಗಳು ಅಂದರೆ ಯಾರಿಗೆ ಇಷ್ಟಇಲ್ಲ ಹೇಳಿ. ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಾದರೆ ಅವರಿಗೆ ರಜೆ ಸಿಗುತ್ತದೆ ತಮ್ಮ ಸ್ನೇಹಿತರ ಜೊತೆ ಆಟವಾಡಬಹುದು ಎನ್ನುವುದೇ ಅವರಿಗೆ ಹೆಚ್ಚು ಖುಷಿ. ಇನ್ನು ದೊಡ್ಡವರಿಗೆ ರಜೆ ಜೊತೆಗೆ ಹಬ್ಬದ ಪ್ರಯುಕ್ತ ರುಚಿಯಾದ ಅಡುಗೆ ಮಾಡಿ ತಿನ್ನುವುದೇ ಅವರ ಮನಸ್ಸಿಗೆ ನೆಮ್ಮದಿ. ಹಾಗಾದರೆ ಯುಗಾದಿ ಹಬ್ಬದ ವಿಶೇಷಗಳೆನೆಂದು ನೊಡೋಣ.
ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು, ರಾಮರಾಜ್ಯವಾಳಲು ಆರಂಭಿಸಿದ. ಅಯೋಧ್ಯೆಯ ಪ್ರಜೆಗಳು ಸಂತೋಷದಿoದ ಮನೆಯ ಮುಂದೆ ವಿಜಯ ಪತಾಕೆಯನ್ನು ಹಾರಿಸಿದರು. ಇಂದಿಗು ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ದತಿ ಇದೆ. ಅದಕ್ಕಾಗಿಯೇ ಇದಕ್ಕೆ ಗುಡಿಪಾಡ್ಯ ಎಂದು ಕರೆಯುತ್ತಾರೆ. ಗುಡಿ ಅಂದರೆ ಬಾವುಟ ಎಂದರ್ಥ. ಗುಜರಾತ್ ಮತ್ತು ಮಹಾರಾಷ್ಟçಗಳಲ್ಲಿ ಯುಗಾದಿಯನ್ನು ಗುಡಿಪಾಡ್ಯ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತೆ.

ಹಿಂದೂಗಳ ಹೊಸ ವರ್ಷ ಎಂದೇ ಕರೆಯಲೊಡುವ ಹಬ್ಬವು ಎಂದರೆ ಅದು ಯುಗಾದಿ. ಯುಗಾದಿ ಅಂದರೆ ಹೊಸ ಅವಧಿಯ ಆರಂಭ ಎಂದರ್ಥ. ಹಿಂದೂಗಳ ಚಂದ್ರಮಾನ ಕ್ಯಾಲೆಂಡರ್ ಚೈತ್ರ ಮಾಸದ ಮದಲಿ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಯುಗಾದಿ ಹಬ್ಬವು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ಹಲವಾರು ಕಡೆ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತೆ.

ಈ ಹಬ್ಬದ ದಿನಂದು ಮೈಗೆ ಎಣ್ಣೆ ಹಚ್ಚಿಕೊಂಡು ಸಾನ್ನ ಮಾಡಿ ದೇವರಿಗೆ ಪೊಜೆ ಸಲ್ಲಿಸುವ ಮುಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಆಚರಣೆ ವಿಚಾರಕ್ಕೆ ಬಂದರೆ ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಭಕ್ತರು ಅರಳೆಣ್ಣೇ ಅಥವಾ ಎಳ್ಳಿನ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನದಿಂದ ದಿನವನ್ನು ಆರಂಭಿಸುತ್ತಾರೆ. ಈ ದಿನದಂದು ಅಡುಗೆ ಏನೇನು ಎಂದು ಕೆಳುವ ಹಾಗೆ ಇಲ್ಲ ಏಕೆಂದರೆ ಅಷ್ಟು ಬಗೆಯ ಅಡುಗೆಗಳನ್ನು ತಯಾರಿಸಲಾಗುತ್ತೆ. ಸಿಹಿ, ಹುಳಿ, ಖಾರ ಇತರ ಇತ್ಯಾದಿ ಮಿಶ್ರ ರುಚಿಯನ್ನು ನೀಡುವ ಅನೇಕ ಭಕ್ಷö್ಯಗಳನ್ನು ತಯಾರಿಸಲಾಗುತ್ತೆ.