ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ (Wife) ಕೊಲೆ ಮಾಡಿರುವ ಘಟನೆ ಕೋರಮಂಗಲದ 6 ಬ್ಲಾಕ್ ರಸ್ತೆ ಬದಿಯಲ್ಲಿ ನಿನ್ನೆ ನಡೆದಿದೆ. ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು (Police) ಯಶ್ವಸಿಯಾಗಿದ್ದಾರೆ.
ಸೆಲ್ವಿನ್ ಫ್ರಾನ್ಸಿಸ್ ಪತ್ನಿಯನ್ನೇ ಕೊಂದ ಪತಿರಾಯ. 12 ವರ್ಷದ ಹಿಂದೆ ಪ್ರೀತಿಸಿ (Love) ಮದುವೆ ಆಗಿದ್ದರು. ಆದರೆ ಕಳೆದ ಒಂದು ವರ್ಷದಿಂದ ಕುಟುಂಬದಲ್ಲಿ ವೈಮನಸ್ಸು ಭುಗಿಲೆದ್ದಿತ್ತು, 5 ತಿಂಗಳ ಹಿಂದೆ ಇಬ್ಬರು ಬೇರೆ ಕೂಡ ಆಗಿದ್ದರು. ನಂತರ ವೆಂಕಟಾಪುರದಲ್ಲಿದ್ದ ತನ್ನ ತಾಯಿ ಮನೆಯಲ್ಲಿ ಮಕ್ಕಳೊಂದಿಗೆ ಇಂದು ವಾಸವಿದ್ದಳು. ಆದರೂ ಒಂದಲ್ಲ ಒಂದು ರೂಪದಲ್ಲಿ ಇವರಿಬ್ಬರ ನಡುವಿನ ವೈಮನಸ್ಸು ಮುಂದುವರೆಯುತ್ತಲೇ ಇತ್ತು, ಸೆಲ್ವಿನ್ ಯಾವಾಗಲೂ ಇಂದುವನ್ನು ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಅನುಮಾನಿಸುತ್ತಲೇ ಇದ್ದ. ಇದನ್ನೂ ಓದಿ: “ಕಮಲಕ್ಕೆ” ಮತ ಹಾಕ್ತೇವೆ ಎಂದಿದ್ದಕ್ಕೆ “ಕೈ” ಕಾರ್ಯಕರ್ತರಿಂದ ಹಲ್ಲೆ
ಕಳೆದ ಐದು ತಿಂಗಳ ಹಿಂದೆ ಬೇರೆಯಾದರೂ ಇವರಿಬ್ಬರ ಜಗಳ ಮುಂದುವರೆದ ಹಿನ್ನಲೆ, ಸೆಲ್ವಿನ್ ಫ್ರಾನ್ಸಿಸ್ ತಾನು ಕೆಲಸ ಮಾಡುವ ಜಾಗದಲ್ಲೂ ತೊಂದರೆ ಕೊಡುತ್ತಿದ್ದಾನೆಂದು ಘಟನೆಯ ಎರಡು ದಿನದ ಹಿಂದೆ ಇಂದು ಠಾಣೆ ಮೆಟ್ಟಿಲೇರಿದ್ದಳು. ಘಟನೆಯ ದಿನವೂ ಠಾಣೆಗೆ ಬಂದಿದ್ದಳು. ಇಂದುವಿನ ದೂರಿನ ಹಿನ್ನಲೆ ಸೆಲ್ವಿನ್‌ಗೆ ಕೋರಮಂಗಲ ಪೊಲೀಸರು ಕರೆ ಮಾಡಿದ್ದರು ಆದರೆ ಪೊಲೀಸರ ಬಳಿ ತಾನು ದೂರದಲ್ಲಿ ಇದ್ದೇನೆ ಎಂದು ಸೆಲ್ವಿನ್ ಹೇಳಿದ್ದ. ಆದರೆ ಯಾರಿಗೂ ತಿಳಿಯದಂತೆ ನೇರವಾಗಿ ಪೊಲೀಸ್ ಠಾಣೆಯ ಬಳಿ ಬಂದಿದ್ದ ಸೆಲ್ವಿನ್ ಇಂದು ಪೊಲೀಸ್ ಠಾಣೆಯಿಂದ ಹೊರಬರುವುದನ್ನೇ ಕಾದು ಕುಳಿತಿದ್ದ. ಇದನ್ನೂ ಓದಿ: 40ಕ್ಕೂ ಹೆಚ್ಚು ಪೊಲೀಸರು ಬಂದು ಹೊಡೆದಿದ್ದಕ್ಕೆ ಸುಳ್ಳು ಹೇಳಿದ್ದೇವೆ
ಸೆಲ್ವಿನ್ ಆಕೆಯನ್ನು ಮಾತನಾಡಿಸಿಕೊಂಡು ಕೊಂಚ ದೂರ ಕರೆದೊಯ್ದವನೇ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ತಕ್ಷಣವೇ ಇಂದುವನ್ನು ಆಸ್ಪತ್ರೆಗೆ ರವಾನೆ ಮಾಡಿದರಾದರೂ ಆಕೆ ಮೃತಪಟ್ಟಿದ್ದಾಳೆ. ಇನ್ನು ತಲೆ ಮರೆಸಿಕೊಂಡಿದ್ದ ಆರೋಪಿ ಸೆಲ್ವಿನ್‌ಗಾಗಿ ತಂಡ ರಚಿಸಿ ಹುಡುಕಾಟ ನಡೆಸಿದ್ದ ಪೊಲೀಸರು 24 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮಹಿಳೆ ಕಿಡ್ನ್ಯಾಪ್ ಕೇಸ್‌ನಲ್ಲಿ ರೇವಣ್ಣ ಅರೆಸ್ಟ್- ಇಂದು ಸಂಜೆಯೊಳಗೆ ಜಡ್ಜ್ ಮುಂದೆ ರೇವಣ್ಣ ಹಾಜರು
ಒಂದೆಡೆ ತಾಯಿ ಮೃತಪಟ್ಟಿದ್ದಾಳೆ. ಇನ್ನೊಂದೆಡೆ ತಾಯಿಯನ್ನು ಕೊಂದ ತಂದೆ ಪೊಲೀಸರ ಅತಿಥಿಯಾಗಿದ್ದಾನೆ. ಒಟ್ಟಾರೆಯಾಗಿ ಇಂದು ಮತ್ತು ಸೆಲ್ವಿನ್ ದಂಪತಿಗಳ ಮಕ್ಕಳು ತಬ್ಬಲಿಗಳಾಗಿದ್ದು ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಸಂತ್ರಸ್ತೆ ಕಿಡ್ನಾಪ್ ಕೇಸ್: ಸಂತ್ರಸ್ತ ಮಹಿಳೆ ಸಿಕ್ಕ ತೋಟದ ಸಿಬ್ಬಂದಿ ಸ್ಫೋಟಕ ಹೇಳಿಕೆ

