ನವದೆಹಲಿ: ಭಯೋತ್ಪಾದಕರನ್ನು ಯಾವುದೇ ಕಾರಣಕ್ಕೊ ಸುಮ್ಮನೆ ಬಿಡಲ್ಲ, ಪಾಕಿಸ್ತಾನಕ್ಕೆ ನುಗ್ಗಿಯಾದರೂ ಅವರನ್ನು ಕೊಲುತ್ತೆವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಚ್ಚರಿಕ್ಕೆ ನೀಡಿದ್ದಾರೆ.
ಭಾರತದಲ್ಲಿ ಭಯೋತ್ವಾದಕ ಚಟುವಟಿಕಗಳನ್ನು ನಡೆಸಲು ಪ್ರಯತ್ನಿಸಿದ ನಂತರ ಗಡಿಯಾಚೆ ಪಲಾಯನ ಮಾಡುವವರನ್ನು ನಿರ್ಮೂಲನೆ ಮಾಡಲು ಭಾರತವು ಪಾಕಿಸ್ತಾನದೊಳಗೆ ನುಗ್ಗಿ ಅವರನ್ನು ಕೊಲ್ಲುತ್ತೇವೆ. ಯಾವುದೇ ಕಾರಣಕ್ಕು ಭಯೋತ್ಪಾದಕರನ್ನು ಬಿಡುವುದಿಲ್ಲ. ನಮ್ಮ ದೆಶದ ಶಾಂತಿ ಕದಡಲು ಯತ್ನಿಸಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎಚ್ಚರಿಕ್ಕೆ ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಯ ಸಾವು-ವರ್ಷದಲ್ಲಿ ಇದಾಗಿದೆ 10 ನೆ ಪ್ರಕರಣ
ಈವರೆಗು ಭಾರತವು ತನ್ ನೆರೆಹೊರೆಯವರೊಂದಿಗೆ ಸೌಹಾರ್ದಯುತ ಸಂಬoಧವನ್ನು ಕಾಪಾಡಿಕೊಳ್ಳಲು ಬಯಸುತ್ತದೆ. ನಮ್ಮ ಇತಿಹಾಸವನ್ನು ನೋಡಿ. ನಾವು ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ. ಯಾವುದೇ ದೇಶದ ಭೂಪ್ರದೇಶದ ಒಂದು ಇಂಚು ಕೊಡ ಅಕ್ರಮಿಸಿಕೊಂಡಿಲ್ಲ. ಇದು ಭಾರತದ ಲಕ್ಷಣವಾಗಿದೆ. ಆದರೆ ಯಾರಾದರೂ ನಮ್ಮ ನೆಲದಲ್ಲಿ ಭಯೋತ್ಪಾದನೆಯನ್ನು ಹರಡುವ ಮೂಲಕ ಭಾರತವನ್ನು ಹೆದರಿಸಲು ಪ್ರಯತ್ನಿಸಿದರೆ ಅವರನ್ನು ಯಾವುದೆ ಕಾರಣಕ್ಕೂ ಬಿಡಲ್ಲ ಎಂದು ಸಿಂಗ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮೇಘಾಲಯ ಸಿಎಂ ಬೆಂಗಾವಲು ವಾಹನ ಹಿಂದೆ ಚಲಿಸುತ್ತಿದ್ದ ಕಾರಿನಲ್ಲಿ ಝಣಝಣ ಕಾಂಚಾಣ – 1.25 ಕೋಟಿ ರೂ ಸೀಜ್