ಪ್ರತಿ ಅಡುಗೆ ಮನೆಯಲ್ಲಿ ಇದ್ದೆ ಇರುವ ಒಂದು ಹಣ್ಣು ಮತ್ತು ತರಕಾರಿ ಅಂದ್ರೆ ಅದುವೇ ನಮ್ಮೆಲ್ಲರ ಅಚ್ಚುಮೆಚ್ಚಿನ ಟೊಮೆಟೊ (Tomato). ಈ ಟೊಮೊಟೊ ತನ್ನದೇ ಆದ ರುಚಿಯಿಂದ ಪಾಕಶಾಲೆಯಲ್ಲಿ ವಿಶಿಷ್ಟವಾದ ಹೆಸರು ಮಾಡಿದೆ ಎನ್ನಬಹುದು. ಈ ಟೊಮೆಟೊ ವಿಟಮಿನ್ಗಳು (Vitamin), ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಕಾರಣ ಇದು ನಮ್ಮ ದೇಹದ ಮೇಲೆ ಅನೇಕ ಪರಿಣಾಮಗಳನ್ನು ಬೀರಬಹುದು ಎಂದು ಯಶೋದಾ ಹಾಸ್ಪಿಟಲ್ಸ್ ಹೈದರಾಬಾದ್ನ (Hydrabad) ವೈದ್ಯ ಮತ್ತು ಮಧುಮೇಹ ತಜ್ಞ ಡಾ.ಕೆ. ಸೋಮನಾಥ್ ಗುಪ್ತಾ ಹೇಳುತಿದ್ದಾರೆ. ಇದಲ್ಲದೇ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು (Health Benifits) ಸಹ ಹೊಂದಿದೆ ಎಂದು ಹೇಳುತ್ತಾರೆ.
ಟೊಮೆಟೊಗಳು, ತಮ್ಮ ಸುಂದರ ಬಣ್ಣ ಮತ್ತು ಉತ್ತಮ ಸುವಾಸನೆಯೊಂದಿಗೆ, ಪ್ರಪಂಚದಾದ್ಯಂತ ಪಾಕಶಾಲೆಯಲ್ಲಿ ಬಹಳ ಹಿಂದಿನಿಂದಲೂ ಪ್ರಧಾನವಾಗಿವೆ.
ಇವುಗಳು ಈ ಪಾಕಶಾಲೆಯ ಬಹುಮುಖತೆಯನ್ನು ಮೀರಿ, ಅನೇಕ ರೀತಿಯ ಪೌಷ್ಠಿಕಾಂಶಗಳನ್ನು ಸಹ ಹೊಂದಿವೆ. ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪಾಸಿಟಿವ್ ಆಗಿ ಪರಿಣಾಮ ಬೀರುತ್ತದೆ. ಆದರೆ ನೀವು ಟೊಮೆಟೊವನ್ನು ದಿನವೂ ಸೇವಿಸಿದರೆ ಆರೋಗ್ಯಕ್ಕೆ ಏನಾಗಬಹುದು? ಎಂಬುದು ತಿಳಿದಿಯೇ?
ನೀವು ಟೊಮೆಟೊವನ್ನು ದಿನವೂ ಸೇವಿಸಿದರೆ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು?
ಇದಕ್ಕೆ ಉತ್ತರವಾಗಿ ಯಶೋದಾ ಹಾಸ್ಪಿಟಲ್ಸ್ ಹೈದರಾಬಾದ್ನ ವೈದ್ಯ ಮತ್ತು ಮಧುಮೇಹ ತಜ್ಞ ಡಾ.ಕೆ. ಸೋಮನಾಥ್ ಗುಪ್ತಾ ಅವರು “ಟೊಮೆಟೊಗಳಲ್ಲಿನ ಲೈಕೋಪೀನ್ನಂತಹ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ಮೂಲಕ ಸುಧಾರಿತ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡಬಹುದು” ಎಂದು ಹೇಳಿದ್ದಾರೆ.
ಲೈಕೋಪೀನ್ ಮತ್ತು β-ಕ್ಯಾರೋಟಿನ್ ಇವು ಟೊಮೆಟೊಗಳಲ್ಲಿ ಕಂಡುಬರುವ ಎರಡು ಪ್ರಮುಖ ಕ್ಯಾರೊಟಿನಾಯ್ಡ್ಗಳು ಮತ್ತು ಹಣ್ಣಿನ ಕ್ಯಾನ್ಸರ್ ವಿರೋಧಿ ಲಕ್ಷಣಗಳನ್ನು ಹೊಂದಿದೆ ಎಂದು ಯಶೋದಾ ಆಸ್ಪತ್ರೆಯ ವೈದ್ಯ ಮತ್ತು ಮಧುಮೇಹ ತಜ್ಞ ಡಾ.ರಂಗ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಟೊಮೆಟೊವು ಕರುಳಿನ ಸೂಕ್ಷ್ಮಜೀವಿಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದಲ್ಲದೇ, ಉರಿಯೂತದ ಪ್ರತಿಕ್ರಿಯೆಗಳು ಮತ್ತು ಕರುಳಿನ ಹಾನಿಯನ್ನು ತಡೆಯುತ್ತದೆ ಎಂದು ಅವರು ಹೇಳಿದರು.
“ಟೊಮೆಟೊ ವಿಟಮಿನ್ ಸಿ ಮತ್ತು ಕೆ, ಅದರ ಜತೆಗೆ ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದೆ. ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಚರ್ಮದ ಆರೋಗ್ಯವನ್ನು ಬೆಂಬಲಿಸುತ್ತದೆ. ಆದರೆ ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆಗಳ ಆರೋಗ್ಯಕ್ಕೆ ಅವಶ್ಯಕವಾಗಿದೆ. ಪೊಟ್ಯಾಸಿಯಮ್ ರಕ್ತದೊತ್ತಡ ಮತ್ತು ದ್ರವ ಸಮತೋಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ” ಎಂದು ಡಾ. ಗುಪ್ತಾ ವಿವರಿಸಿದರು.
ಟೊಮೆಟೊಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅವುಗಳ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶದಿಂದಾಗಿ ತೂಕ ನಿರ್ವಹಣೆಗೆ ಸಹಾಯ ಮಾಡಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ:
ಫಸ್ಟ್ ಟೈಂ ಉಪ್ಪಿಟ್ಟು ಮಾಡ್ತಿದ್ರೆ ಪ್ಲಾನ್ B ಸದಾ ಸಿದ್ಧವಾಗಿರಲಿ!
“ಟೊಮೆಟೊದಲ್ಲಿನ ಫೈಬರ್ ದೇಹದ ಶಕ್ತಿಯನ್ನು ಉತ್ತೇಜಿಸುತ್ತದೆ, ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.”
ಟೊಮೆಟೊ ತಿನ್ನುವುದರಿಂದ ಆಗುವ ಪರಿಣಾಮಗಳೇನು?
- ಕೆಲವು ಜನರು ಟೊಮೆಟೊಗಳ ಆಮ್ಲೀಯ ಗುಣಕ್ಕೆ ಸೂಕ್ಷ್ಮವಾಗಿರಬಹುದು. ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು ಅಥವಾ ಆಸಿಡ್ ರಿಫ್ಲಕ್ಸ್ನಂತಹ ಪರಿಸ್ಥಿತಿಗಳ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು.
- ಇದರ ಹೆಚ್ಚಿನ ಸೇವನೆ ಪೌಷ್ಟಿಕಾಂಶದ ಅಸಮತೋಲನಕ್ಕೆ ಕಾರಣವಾಗಬಹುದು.
- ಇದು “ಮೂತ್ರದ ತೊಂದರೆಗಳು, ಮೈಗ್ರೇನ್, ಗ್ಲೈಕೋಲ್ಕಲಾಯ್ಡ್ಗಳಿಗೆ ಸಂಬಂಧಿಸಿದ ದೇಹದ ನೋವುಗಳು, ಅನಾಫಿಲ್ಯಾಕ್ಟಿಕ್ ಪ್ರತಿಕ್ರಿಯೆಗಳು, ಲೈಕೋಪೆನೊಡರ್ಮಿಯಾ” ಗೆ ಕಾರಣವಾಗಬಹುದು ಎಂದು ಡಾ. ಸಂತೋಷ್ ಕುಮಾರ್ ಹೇಳಿದರು.
ವಧುವಾಗಿ ಮಿಂಚಿದ ಕೆಜಿಎಫ್ ಚೆಲುವೆ
ಟೊಮೆಟೋಗಳನ್ನು ಯಾರು ಹೆಚ್ಚು ಸೇವಿಸಬಾರದು?
ಮೂತ್ರಪಿಂಡದ ಕಲ್ಲುಗಳಂತಹ ಕೆಲವು ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳು ಆಕ್ಸಲೇಟ್ಗಳ ಉಪಸ್ಥಿತಿಯಿಂದಾಗಿ ತಮ್ಮ ಟೊಮೆಟೊ ಸೇವನೆಯನ್ನು ವೈದ್ಯರ ಶಿಫಾರಸಿನ ಮೇರೆಗೆ ಸೇವಿಸಬೇಕು. ಇದು ಮೂತ್ರಪಿಂಡದ ಕಲ್ಲುಗಳನ್ನು ಹೆಚ್ಚು ಮಾಡಬಹುದು ಎಂದು ಡಾ. ಗುಪ್ತಾ ಗಮನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ