ಕೋಲಾರ : ಬಸ್ಸಿನಲ್ಲಿ ಬ್ಯಾಗ್ ಕಳೆದುಕೊಂಡು ತಳಮಳಗೊಂಡಿದ್ದ ಅಜ್ಜಿಗೆ ಪೊಲೀಸರು ಬ್ಯಾಗ್ ಹುಡುಕಿಕೊಟ್ಟ ಘಟನೆ ನಗರದ ಕೆ.ಎಸ್.ಆರ್. ಟಿ.ಸಿ. ಬಸ್ ನಿಲ್ದಾಣದಲ್ಲಿ ನಡೆದಿದೆ.
ನಗರದ ಕೆ.ಎಸ್.ಆರ್. ಟಿ.ಸಿ. ಬಸ್ ನಿಲ್ದಾಣದಲ್ಲಿ ಸುಮಾರು 85 ವರ್ಷದ ಅಜ್ಜಿ ಒಬ್ಬರು ಬಸ್ಸಿನಲ್ಲಿ ತನ್ನ ಬ್ಯಾಗನ್ನು ಕಳೆದುಹೋಗಿರುವ ತಳಮಳಗೊಂಡಿದ್ದನ್ನು ಗಮನಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು KSRTC ಕಂಟ್ರೋಲ್ ರೂಮ್ ಸಿಬ್ಬಂದಿ ರವರ ಸಹಾಯ ಪಡೆದು ಕಳೆದುಕೊಂಡ ಬ್ಯಾಗನ್ನು ಪತ್ತೆ ಹಚ್ಚಿ ಅಜ್ಜಿಗೆ ಹಿಂದಿರುಗಿಸಿದ ಘಟನೆ ನಡೆದಿದೆ. ಇದೇ ಸಂದರ್ಭದಲ್ಲಿ ಗಮನ ಬೇರೆಡೆ ಸೆಳೆದು ಕಳವು, ಮತ್ತು ಸರಗಳ್ಳತನದ ಬಗ್ಗೆ ಅರಿವು ಮೂಡಿಸಲಾಗಿರುತ್ತದೆ.