ಕೋಲಾರ: ಬಿಜೆಪಿ (BJP) ಸರ್ಕಾರವು ಬಡವರ ಮತ್ತು ರೈತರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸದ ಕಾರಣ ದೇಶದ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ಹೇಳಿದ್ದಾರೆ.
ಕೋಲಾರ (Kolar) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಪರ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಸಂವಿಧಾನಕ್ಕೆ ಧಕ್ಕೆ ಉಂಟಾಗಿದ್ದು, ಇಂಡಿಯಾ ಮೈತ್ರಿಕೂಟವನ್ನು ಅಧಿಕಾರಕ್ಕೆ ತರದಿದ್ದರೆ ಜನತೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.ಇದನ್ನೂ ಓದಿ: ಮಂಡ್ಯಕ್ಕೆ ಕೈ ನಾಯಕ ರಾಹುಲ್ ಎಂಟ್ರಿ, ಇಂಚಿಂಚೂ ಹೆಲಿಕಾಪ್ಟರ್ ಚೆಕ್ಕಿಂಗ್
ಜೊತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟçವ್ಯಾಪಿ ಜಾತಿ ಗಣತಿ ನಡೆಸಲಾಗುವುದು. ಇದರಿಂದ ಅಗತ್ಯವಿರುವವರಿಗೆ ಪ್ರಯೋಜನವಾಗಲಿ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಐಸ್‌ಕ್ರೀಂ ತಿಂದು ಅವಳಿ ಮಕ್ಕಳ ಅನುಮಾನಾಸ್ಪದ ಸಾವು
ಬಾಲ್ಯದ ನೆನಪುಗಳ ಮೆಲಕು ಹಾಕಿದ ರಾಹುಲ್ ಗಾಂಧಿ
ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಕೋಲಾರದ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ಗೆ ಭೇಟಿ ನೀಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ಬಸ್‌ನಲ್ಲಿ ಬಿಕಿನಿ ತೊಟ್ಟು ಸಂಚರಿಸಿದ ಮಹಿಳೆ

ದೇಶದ ಪಕ್ಷಪಾತ ತಾಂಡವವಾಡುತ್ತಿದ್ದು ಎನ್ ಡಿಎ ಸರ್ಕಾರದಲ್ಲಿ ಕೇವಲ 20 ಉದ್ಯಮಿಗಳು 70 ಕೋಟಿ ಜನರ ಸಂಪತ್ತನ್ನು ಸಂಗ್ರಹಿಸಿದ್ದಾರೆ. ಪ್ರಭಾವಿ ಉದ್ಯಮಗಳಿಗೆ ಅನುಕೂಲ ಮಾಡಿಕೊಡಲು ಇಡಿ, ಸಿಬಿಐನಂತಹ ಸಂಸ್ಥೆಗಳನ್ನು ಪ್ರಧಾನಿ ಬಳಸಿಕೊಳ್ಳುತ್ತಿರುವುದು ಅಆಮೀತಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.ಇದನ್ನೂ ಓದಿ: ಪಕ್ಕದ ಮನೆಗೆ ಕನ್ನ ಹಾಕಿದ್ದ ಯುವತಿಗೆ ಸ್ನೇಹಿತನ ಸಾಥ್ – ಇಬ್ಬರನ್ನು ಬಂಧಿಸಿದ ಪೊಲೀಸರು
ಮೋದಿ ಸರ್ಕಾರ ಆಯ್ದು ಉದ್ಯಮಿಗಳ 16 ಲಕ್ಷ ಕೋಡಿ ರೂ.ಗಳ ಸಾಲವನ್ನು ಮನ್ನಾ ಮಾಡಿದೆ. ಬೆರಳೆಣಿಕೆಯಷ್ಟು ಬಂಡವಾಳಶಾಗಿಗಳೀಗೆ ಸಹಾಯ ಮಾಡಲಕು ಪ್ರಧಾನಿ ನರೇಂದ್ರ ಮೋದಿ ಯಾವುದೇ ಹಂತಕ್ಕೂ ಹೋಗುತ್ತಾರೆ ಎಂದು ಅವರು ಟೀಕಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಮದ್ಯ ಶಂಕೆ ಮೇಲೆ ದಾಳಿ- ದಾಳಿಯಲ್ಲಿ 18 ಕೋಟಿ ಪತ್ತೆ
ದಲಿತ, ಹಿಂದೂಳಿದ ವರ್ಗಗಳು ಮತ್ತು ಅಲ್ಪಸಂಖ್ಯತ ಸಮುದಾಯಗಳಿಗೆ ಸೇರಿದ ಶೇ 90 ಕ್ಕೂ ಹೆಚ್ಚು ಜನರಿಗೆ ಯಾವುದೇ ಕ್ಷೇತ್ರದಲ್ಲಿ ಅವಕಾಶ ದೊತರೆಯುತ್ತಿಲ್ಲ. ಇದು ಈ ಸರ್ಕಾರ ದೀನದಲಿತರು ಮತ್ತು ಕಷ್ಟದಲ್ಲಿರುವವರ ಪರವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ. ಅಧಿಕಾರಕ್ಕೆ ಬಂದರೆ, ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯವನ್ನು ಒದಗಿಸಲು ಕಾಂಗ್ರೆಸ್ ಕಗ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಟ್ಯಾಬ್ಲೆಟ್ ಮೂಲಕ ರಾಮನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದನ್ನು ವೀಕ್ಷಿಸಿದ ಮೋದಿ

