ಸ್ಯಾಂಡಲ್ವುಡ್ ನಿದೇಶಕ ಹಾಗೂ ಜೆಟ್‌ಲ್ಯಗ್ ಮಾಲೀಕ ನಿದೇರ್ಶಕ ಸೌಂದರ್ಯ ಜಗದೀಶ್ ಅವರ ಪಾರ್ಥಿವ ಶರೀರಕ್ಕೆ ಮನೆಯವರು ಅಂತಿಮ ಪೂಜೆ ಮಾಡಿದ್ದಾರೆ. ಪತ್ನಿ ರೇಖಾ, ಪುತ್ರಿ ಸೌಂದರ್ಯ ಹಾಗೂ ಪುತ್ರ ಸ್ನೇಹಿತ್ನ್ ಅವರು ಕಣ್ಣಿರು ಹಾಕುತ್ತಿದ್ದು, ಆಕ್ರಂದನ ಮುಗಿಲುಮುಟ್ಟಿದೆ.
ಸೌಂದರ್ಯ ಜಗದೀಶ್ ಮೈತ ದೇಹವನ್ನು ಹಿರಿಸಾವೆ ಕಡೆಗೆ ಕೊಂಡೊಯ್ಯಲಾಗುತ್ತಿದೆ. ಚಿರಾಶಾಂತಿ ವಾಹನದಲ್ಲಿ ಜಗದೀಶ್ ಮೃತದೇಹ ತೆಗೆದುಕೊಂಡು ಹೋಗಲಾಗುತ್ತಿದೆ. ಅದಕ್ಕೂ ಮುಂಚೆ ನಿವಾಸದಲ್ಲಿ ಅಂತಿಮ ಪೊಜೆ ಮಾಡಲಾಯಿತು. ಮಧ್ಯಾಹ್ನ 12 ರ ನಂತರ ಅವರ ಹಾಸನದ ಹೈವೇದಲ್ಲಿರುವ ಫಾರ್ಮ ಹೌಸ್‌ನಲ್ಲಿ ಅಂತ್ಯಕ್ರಿಯೆ ಮಾಡಲಿದ್ದಾರೆ.
ಪ್ರೊಡ್ಯೂಸರ್, ಬಿಲ್ಡರ್ ಹಾಗೂ ಜೆಟ್‌ಲ್ಯಾಗ್ ಮಾಲೀಕರು ಆಗಿರುವ ಸೌಂದರ್ಯ ಜಗದೇಶ್ ಅವರು ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಯತ್ನ ಮಾಡಿದ್ರು. ಮನೆಯವರು ಜಗದೀಶ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಅವರು ಹಾಗಲೇ ಉಸಿರು ಚೆಲ್ಲಿದ್ದರು.