ಬೆಂಗಳೂರು: ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ (Dwarakish) ಅವರು ಹೃದಯಾಘಾತದಿಂದ (Heart attack) ಇಂದು ನಿಧನ ಹೊಂದಿದದಾರೆ.
ಸುಮಾರು 81 ವರ್ಷದ ವಯಸ್ಸಿನ ದ್ವಾರಕೀಶ್ ಅವರು ಕನ್ನಡಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದು, ಅವರ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಡಾ.ವಿಷ್ಣುವರ್ಧನ ಅವರ ಜೊತೆ ಮತ್ತು ಹಲವಾರು ದಿಗ್ಗಜರ ಜೊತೆ ನಟಿಸಿ ಫೇಮಸ್ ಆಗಿದ್ದ ಅವರು ಇನ್ನಿಲ್ಲ ಎಂಬ ಸುದ್ದಿ ಸಾಕಷ್ಟು ನೋವುಂಟು ಮಾಡಿದೆ.
ಅವರಿಗೆ ರಾತ್ರಿ ಲೂಸ್ ಮೋಷನ್ ಆಯ್ತು. ಆದರಿಂದ ರಾತ್ರಿ ನಿದ್ದೆ ಮಾಡಿರಲಿಲ್ಲ. ನಂತರ ಬೆಳಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಬಳೀಕ ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ ಎಂದು ದ್ವಾರಕೀಶ್ ಪುತ್ರ ಯೋಗಿ ಅವರು ಮಾಹಿತಿ ನೀಡಿದ್ದಾರೆ.

