ಬೆಂಗಳೂರು : ನೆನ್ನೆ ಬೆಂಗಳೂರಿನ ಬಳಿ ಇರುವ ಬಿಡದಿ ಹತ್ತಿರ ನಡೆದಿರುವ ದುರಂತ, 14 ವರ್ಷದ ಹೆಣ್ಣು ಕಂದಮ್ಮನನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿ ರೈಲ್ವೆ ಹಳಿಯ ಪಕ್ಕ ಹಾಕಿ ವಿಕೃತಿ ಮೆರೆದಿದ್ದಾರೆ,
ಬೆಂಗಳೂರಿನ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಮಾನುಷವಾಗಿ ಒಂದು ಹೆಣ್ಣು ಕಂದಮ್ಮನ ಮೇಲೆ ಅತ್ಯಾಚಾರ ವ್ಯಸಗಿ ಪಕ್ಕದ ರೈಲ್ವೆ ಹಳಿಯ ಹತ್ತಿರ ಎಸೆದು ಹೋಗಿದ್ದಾರೆ, ಹಂತಕರಿಗೆ ಗಲ್ಲು ಶಿಕ್ಷೆ, ವಿಧಿಸಬೇಕೆಂದು ನಮ್ಮ ಕಾನೂನಿನ ಮುಖ್ಯಸ್ಥರಲ್ಲಿ ಮನವಿ ಮಾಡುತ್ತೇವೆ,ಎಂದು ನಾಗರಿಕರು ತಿಳಿಸಿದ್ದಾರೆ,
ಇದು ಒಂದು ಬಡ ಹೆಣ್ಣು ಮಗು ನಮ್ಮ ಈ ಸಮಾಜದಲ್ಲಿ ನ್ಯಾಯ ಸಿಗೋದು ತುಂಬಾ ಕಷ್ಟನೇ ಯಾಕೆಂದರೆ ಇವಳು ಯಾವ ಸೆಲೆಬ್ರಿಟಿ ನಲ್ಲ, ಎಲ್ಲೋ ನಾರ್ತ್ ನಲ್ಲಿ ನಡೆಯೋ ವಿಷಯನ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತೀರಾ, ಅದೇ ರೀತಿಯಾಗಿ ನಮ್ಮ ಕರ್ನಾಟಕದಲ್ಲಿ ನಡೆದಿರುವ ಈ ಕೃತ್ಯದ ಬಗ್ಗೆ ಮಾಧ್ಯಮದವರು ಧ್ವನಿ ಎತ್ತಬೇಕು,ಈ ಹೆಣ್ಣು ಮಗುವಿಗೆ ನ್ಯಾಯ ಕೊಡಿಸಬೇಕೆಂದು ಸಾರ್ವಜನಿಕರು ತಿಳಿಸಿದ್ದಾರೆ,

