ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಭರ್ಜರಿ ಬೇಟೆ
48 ಗಂಟೆಗಳಲ್ಲಿ ಒಟ್ಟು ಆರು ಉಗ್ರರ ಎನ್ಕೌಂಟರ್
ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ನಾದೀರ್ ಗ್ರಾಮ
ದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿ
ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಬೇಟೆಯಾಡಿದ್ದು 48 ಗಂಟೆಗಳಲ್ಲಿ ಒಟ್ಟು ಆರು ಉಗ್ರರ ಎನ್ಕೌಂಟರ್ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ನಾದೀರ್ ಗ್ರಾಮದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್ ಏ ಮೊಹಮ್ಮದ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಉಗ್ರರು ಅವಿತಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿ ಮೇರೆಗೆ ಸೇನೆ, ಅವಂತಿಪೋರದ ನಾಡರ್ ಮತ್ತು ತ್ರಾಲ್ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಕಳೆದ 48 ಗಂಟೆಗಳಲ್ಲಿ ಎರಡನೇ ಸೇನಾ ಕಾರ್ಯಾಚರಣೆ ಇದಾಗಿದ್ದು, ಈವರೆಗೆ ಒಟ್ಟು ಆರು ಉಗ್ರರು ಹತರಾಗಿದ್ದಾರೆ. ಇನ್ನೂ ಕೆಲವು ಉಗ್ರರು ಅವಿತಿರುವ ಬಗ್ಗೆ ಮಾಹಿತಿ ಇದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಶೆಡ್‌ನಲ್ಲಿ ಅಡಗಿರುವ ಭಯೋತ್ಪಾದಕರ ಡ್ರೋನ್ ದೃಶ್ಯಗಳು
ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ಗುರುವಾರ ಮುಂಜಾನೆ ಪ್ರಾರಂಭವಾದ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ ನಾಟಕೀಯ ದೃಶ್ಯಗಳು ಹೊರಬಿದ್ದಿವೆ.

ಒಂದು ವೀಡಿಯೊದಲ್ಲಿ ಭಯೋತ್ಪಾದಕರಲ್ಲಿ ಒಬ್ಬನು ಕಾಂಕ್ರೀಟ್ ಕಂಬದ ಹಿಂದೆ ಕುಳಿತಿರುವುದನ್ನು ಕಾಣಬಹುದು, ಅವನ ಕೈಯಲ್ಲಿ ಅಸಾಲ್ಟ್ ರೈಫಲ್‌ನಂತೆ ಕಾಣುವ ವಸ್ತುವನ್ನು ಹಿಡಿದಿರುವುದು ಕಂಡುಬರುತ್ತದೆ. ಇನ್ನೊಂದು ವೀಡಿಯೊದಲ್ಲಿ, ದೂರದಿಂದ ಚಿತ್ರೀಕರಿಸಲಾದ, ಮುರಿದ ಶೆಡ್‌ನಂತೆ ಕಾಣುವ ಒಂದು ವಸ್ತುವಿನೊಳಗೆ ಭಯೋತ್ಪಾದಕರು ಗುಂಪುಗೂಡಿರುವುದನ್ನು ಕಾಣಬಹುದು.
ದಕ್ಷಿಣ ಕಾಶ್ಮೀರದ ಪುಲ್ವಾಮಾದ ಉಪಜಿಲ್ಲೆಯಾದ ಅವಂತಿಪೋರಾದ ಟ್ರಾಲ್ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಮೊದಲು ಮನೆಯಲ್ಲಿ ಆಶ್ರಯ ಪಡೆದಿದ್ದ ಮೂವರೂ ಸಾವನ್ನಪ್ಪಿದರು.

